ಏ. 5: ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವದ ನೇಮೋತ್ಸವ

ಪುತ್ತೂರು: ಮಾಡಾವು ಪಲ್ಲತ್ತಡ್ಕದ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವ ಏ. 5ರಂದು ನಡೆಯಲಿದೆ.

ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳ ತಂಬಿಲ, ಶ್ರೀ ವೆಂಕಟರಮಣ ದೇವರ ಸೇವೆ, ಮಧ್ಯಾಹ್ನ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ರಾತ್ರಿ ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿಯಿಂದ ಭಜನೆ, ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ಶ್ರೀ ಹೊಸಮ್ಮ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ.





















































 
 

ಏ. 6ರಂದು ಬೆಳಿಗ್ಗೆ ಶ್ರೀ ದೈವದ ಗಣಗಳಿಗೆ ಬಲಿ ಸೇವೆ. ಏ. 7ರಂದು ಬೆಳಿಗ್ಗೆ ಪರಿವಾರ ದೈವಗಳಾದ ಪಂಜುರ್ಲಿ, ಕಲ್ಲುರ್ಟಿ, ಕಲ್ಲಾಲ್ತ ಗುಳಿಗ ಮತ್ತು ಓರಿಮಾಣಿ ಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top