ಭಾರತೀಯ ಕರೆನ್ಸಿ ಬದಲಾಗಿ ಯುಎಇ ದಿರ್ಹಾಮ್ ಕಡಿಮೆ ಬೆಲೆಗೆ ನೀಡುವುದಾಗಿ ವಂಚನೆ : 6 ಮಂದಿ ಸೆರೆ

ಸಾಬೂನು ಪ್ಯಾಕೆಟ್‌ ಕೊಟ್ಟು ಹಣ ಕಸಿದು ಪರಾರಿಯಾಗುತ್ತಿದ್ದ ಖದೀಮರು

ಉಡುಪಿ : ಭಾರತೀಯ ಕರೆನ್ಸಿ ಬದಲಾಗಿ ಯುಎಇ ದಿರ್ಹಾಮ್ ಕಡಿಮೆ ಬೆಲೆಗೆ ನೀಡುವುದಾಗಿ ಭರವಸೆ ನೀಡಿ ಹಲವು ವ್ಯಕ್ತಿಗಳಿಗೆ ವಂಚಿಸಿದ ಆರೋಪದಡಿ ಉಡುಪಿ ಪೊಲೀಸರು ಆರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನೆಲಿಸಿದ್ದ ಮೊಹಮ್ಮದ್ ಪೋಲಾಶ್ ಖಾನ್ (42), ಮುಂಬೈ ಮೂಲದ, ಮಹಮ್ಮದ್ ಮಹತಾಬ್ ಬಿಲ್ಲಾಲ್ ಶೇಕ್ (43), ಪಶ್ಚಿಮ ಬಂಗಾಳದ ಮಹಮ್ಮದ್ ಫಿರೋಜ್ (30), ದಿಲ್ಲಿಯಲ್ಲಿ ವಾಸವಾಗಿರುವ ನೂರ್ ಮಹಮ್ಮದ್ (36) ಹರಿಯಾಣದ ಮೀರಜ್ ಮತ್ತು ದಿಲ್ಲಿಯ ಮೊಹಮ್ಮದ್ ಜಹಾಂಗೀರಾ (60) ಬಂಧಿತ ಆರೋಪಿಗಳು.
ಆರೋಪಿಗಳು ಕರೆನ್ಸಿ ವಿನಿಮಯದಲ್ಲಿ ಕಡಿಮೆ ಬೆಲೆಗೆ ಯುಎಇ ದಿರ್ಹಾಮ್ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಕುರಿತು ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಭೇದಿಸಲು ಉಡುಪಿ ಎಸ್ಪಿ ಅಕ್ಷಯ ಎಂ.ಎಚ್. ವಿಶೇಷ ತಂಡ ರಚಿಸಿದ್ದರು.

ಆರೋಪಿಗಳು ಮೊದಲು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ನಂತರ ತಮ್ಮ ಬಳಿ ವಿದೇಶಿ ಕರೆನ್ಸಿ ಇದೆ ಎಂದು ಹೇಳುತ್ತಿದ್ದರು. ಹಣ ಬದಲಾಯಿಸಿಕೊಳ್ಳಲು ಸ್ಥಳ ನಿಗದಿ ಮಾಡುತ್ತಿದ್ದರು. ಹಣ ಬದಲಾಯಿಸಿಕೊಳ್ಳಲು ಸ್ಥಳಕ್ಕೆ ಬಂದ ಸಂತ್ರಸ್ತರಿಗೆ ದಿರಾಹಮ್‌ಗಳ ಬದಲಿಗೆ ಬಟ್ಟೆಯಲ್ಲಿ ಸುತ್ತಿದ ಸಾಬೂನಿನ ಪ್ಯಾಕೆಟ್​​ನ್ನು ನೀಡುತ್ತಿದ್ದರು. ಸಂತ್ರಸ್ತರು ಆರೋಪಿ ನೀಡಿದ ವಿದೇಶಿ ಕರೆನ್ಸಿ ನೋಟುಗಳಿರುವ ಬ್ಯಾಗ್​​ನ್ನು ಪರಿಶೀಲಿಸುವ ಮೊದಲೇ ಆರೋಪಿಗಳು ಹಣವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು ಎಂದು ಎಸ್​ಪಿ ಎಸ್ಪಿ ಅಕ್ಷಯ ಎಂ.ಎಚ್. ಹೇಳಿದ್ದಾರೆ.
ಆರೋಪಿಗಳ ವಿರುದ್ಧ ದಿಲ್ಲಿ ಮತ್ತು ದಾವಣಗೆರೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದೇ ರೀತಿಯ ಅಪರಾಧ ಎಸಗಿದ್ದಾರೆ. ಆರೋಪಿಗಳನ್ನು ಮಾ.31ರಂದು ಬಂಧಿಸಿ ಕಸ್ಟಡಿಗೆ ಪಡೆದ ನಂತರ ಪೊಲೀಸರು 100 ದಿರ್ಹಮ್ ಮೌಲ್ಯದ 32 ವಿದೇಶಿ ಕರೆನ್ಸಿ ನೋಟುಗಳು, 19 ಮೊಬೈಲ್ ಫೋನ್‌ಗಳು, 6.29 ಲಕ್ಷ ರೂ. ಹಣ, ಮೂರು ಮೋಟಾರ್‌ಸೈಕಲ್‌ ಮತ್ತು 30 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top