ಭರಮಸಾಗರ: ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಿರತೆಯೊಂದು ಜಿಗಿದಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಉರುಳಿದ ಘಟನೆ ನಡೆದಿದೆ.
ಓಬಳಾಪುರ ಗ್ರಾಮದ ಉಮೇಶ್ ಎಂಬವರ ಟ್ರ್ಯಾಕ್ಟರ್‌ಗೆ ಚಿರತೆ ಅಡ್ಡ ಬಂದ ಪರಿಣಾಮ ಟ್ರ್ಯಾಕ್ಟರ್ ಗುಂಡಿಗೆ ಬಿದ್ದಿರುವುದಾಗಿದೆ.
ಆ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಕಳೆದ ವರ್ಷವೂ ಕಂಡು ಬಂದಿದ್ದು, ವಿಡಿಯೋ ಸಹ ವೈರಲ್ ಆಗಿತ್ತು.ಈ ಬಾರಿಯೂ ಚಿರತೆಯ ಸಂಚಾರ ಇರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಚಿರತೆ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಏನಾದರೂ ಅಪಾಯ ಸಂಭವಿಸುವ ಮುನ್ನ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
























