ಎಂಟರಷ್ಟು ಸಚಿವರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು : ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ಬುಧವಾರ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ 4 ಗಂಟೆಯ ನಂತರ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂದೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಜೊತೆಗೆ ಸುಮಾರು ಎಂಟರಷ್ಟು ಸಚಿವರು ಪ್ರಮಾಣವಚನ ಸ್ವೀಕಾರಿಸಲಿದ್ದಾರೆ. ಜೋತಿಷಿ ದ್ವಾರಕನಾಥ್ ಅವರು ಡಿಕೆಶಿಗೆ ಅಧಿಕಾರ ಗ್ರಹಣದ ಮೂಹೂರ್ತ ನೀಡಿದ್ದಾರೆ ಎನ್ನಲಾಗಿದೆ. ಅವರ ಸಲಹೆಯಂತೆ ಡಿಕೆಶಿ ಬುಧವಾರ ಗೋಧೂಳಿ ಮುಹೂರ್ತವನ್ನು ಆರಿಸಿಕೊಂಡಿದ್ದಾರೆ.
ಕಳೆದ ಗುರುವಾರ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶನಿವಾರ ಸಂಜೆ ಶಾಸಕಾಂಗ ಸಭೆ ಕರೆಯಲಾಗಿದ್ದು, ಅಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಯಾಗಿ ಅಧಿಕೃತ ಫೋಷಣೆ ಮಾಡಲಾಗುತ್ತದೆ.
























