ಕೇರಳ ವಿಧಾನಸಭಾ ಅಧಿವೇಶನದಲ್ಲಿ ಪೂರ್ಣವಾಗಿ ಹಾಡದ ‌ವಂದೇ ಮಾತರಂ: ರಾಜ್ಯಪಾಲರ ಅಸಮಾಧಾನ

ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣವಾಗಿ ಮಾಡದೇ ಇರುವುದಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಗತಿ ರಾಜ್ಯಪಾಲರ ಕಚೇರಿ ಮತ್ತು ಕೇರಳ ರಾಜ್ಯ ಸರ್ಕಾರದ ನಡುವಿನ ಉದ್ವಿಗ್ನತೆಗೆ ಕಾರಣವಾಗಿದೆ.

ಹದಿನಾರನೇ ಕೇರಳ ವಿಧಾನಸಭಾ ಮೊದಲ ಅಧಿವೇಶನದಲ್ಲಿ ಕೇರಳ ಪೊಲೀಸ್ ಬ್ಯಾಂಡ್ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ನುಡಿಸದೇ ಇರುವ ಕಾರಣಕ್ಕೆ ಹೊಸ ರಾಜಕೀಯ ಕೋಲಾಹಲ‌ ಉಂಟಾಗಿರುವುದಾಗಿದೆ.





















































 
 

ರಾಜ್ಯಪಾಲರು ತಾವು ಹಾಜರಿದ್ದಾಗ ವಿಧಾನಸಭೆಯಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಹಾಡದ ಕಾರಣ ಶಿಷ್ಟಾಚಾರವನ್ನು ಸರಿಯಾಗಿ ಪಾಲಿಸಲಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಭಾಷಣದ ಮೊದಲು ಮತ್ತು ನಂತರ ಬ್ಯಾಂಡ್ ತಂಡವು ಹಾಡಿನ ಕೆಲವು ಭಾಗಗಳನ್ನು ಮಾತ್ರ ನುಡಿಸಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ರಾಜ್ಯಪಾಲರು ಈ ವಿಷಯವನ್ನು ವಿಧಾನಸಭಾ ಸ್ಪೀಕ‌ರ್ ತಿರುವಂಚೂರು ರಾಧಾಕೃಷ್ಣನ್ ಅವರೊಂದಿಗೆ ಪ್ರಸ್ತಾಪಿಸಿದ್ದು, ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

error: Content is protected !!
Scroll to Top