ಪುತ್ತೂರು: ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಬೆಳೇತಂಗಡಿಯ ತೆಕ್ಕಾರಿನ ಯುವಕನನ್ನು ಪರಿಚಯಸ್ಥ ಮೂವರು ಅಪಹರಿಸಿ, ರಿಕ್ಷಾದಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಹಲ್ಲೆಗೊಳಗಾದವರನ್ನು ಮಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ.
ಮೇ 25 ರಂದು ಕೆದಿಲದ ಗಡಿಯಾರದಲ್ಲಿ ತಮ್ಮ ಭಾವನಿಗೆ ಸ್ಕೂಟರ್ ನೀಡುವ ಸಲುವಾಗಿ ಕಾಯುತ್ತಿದ್ದಾಗ ಪರಿಚಯದವರೇ ಆದ ಆಸಿಫ್, ಶಾಕಿರ್ ಮತ್ತು ಆಸೀಫ್ ಎಂಬವರು ತನ್ನನ್ನು ಅಪಹರಿಸಿ ರಿಕ್ಷಾದಲ್ಲಿ ಹಾಕಿಕೊಂಡು ಸಜೀಪ ಎಂಬಲ್ಲಿ ಗುಡ್ಡವೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಮೇ 26 ರ ವರೆಗೆ ಗುಡ್ಡದಲ್ಲೇ ಇರಿಸಿಕೊಂಡು ಹಲ್ಲೆ ಮಾಡಿದ್ದು, 27 ರಂದು ಆರೋಪಿಗಳು ನಿದ್ದೆ ಮಾಡುವ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಿ ಇರ್ಷಾದ್ ತಿಳಿಸಿದ್ದಾರೆ.
ಆರೋಪಿ ಶಾಕೀರ್ ತನಗೆ ಹಣ ನೀಡಲು ಬಾಕಿ ಇದ್ದು, ಅದನ್ನು ಕೇಳಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
























