66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಚೋರನ ಬಂಧನ

ಅತಿದೊಡ್ಡ ಅಂತರ್‌ಜಾಲ ಮಾಹಿತಿ ಕಳ್ಳತನ ಪ್ರಕರಣ

ಹೈದರಾಬಾದ್ : 66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಸೈಬರ್‌ ಚೋರನೊಬ್ಬನನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನ 56 ಲಕ್ಷ ಜನರು ಸೇರಿ ಎಂಟು ಮೆಟ್ರೋ ನಗರಗಳು, 24 ರಾಜ್ಯಗಳ 44 ವಿಭಾಗಗಳಲ್ಲಿ ಜನರ ಮಾಹಿತಿಯನ್ನು ಕಳ್ಳತನ ಮಾಡಿರುವ ದೇಶದ ಅತಿ ದೊಡ್ಡ ಡೇಟಾ ಕಳವು ಪ್ರಕರಣ ಇದು ಎಂದು ಸೈಬರಾಬಾದ್ ಪೊಲೀಸರು ಹೇಳಿದ್ದಾರೆ.



































 
 

ಒಟ್ಟಾರೆ 66.9 ಕೋಟಿ ಜನರ ಮತ್ತು ಖಾಸಗಿ ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಈತ ಕದ್ದಿದ್ದ. ಬಂಧಿತ ಆರೋಪಿಯನ್ನು ವಿನಯ್ ಭಾರದ್ವಾಜ್‌ ಎಂದು ಗುರುತಿಸಲಾಗಿದೆ. ಈತನಿಂದ ಶಿಕ್ಷಣ-ತಂತ್ರಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳ ದತ್ತಾಂಶವನ್ನು ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಎಸ್‌ಟಿ, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಫಿನ್‌ಟೆಕ್ ಕಂಪನಿಗಳಂತಹ ಪ್ರಮುಖ ಸಂಸ್ಥೆಗಳ ಗ್ರಾಹಕರ ಮಾಹಿತಿಗಳಿಗೆ ಆರೋಪಿ ಕನ್ನ ಹಾಕಿದ್ದ. ಆರೋಪಿ ಬಳಿ ಇರುವ ಕೆಲವು ಪ್ರಮುಖ ಮಾಹಿತಿಗಳಲ್ಲಿ ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಡಿ-ಮ್ಯಾಟ್ ಖಾತೆದಾರರು, ವಿವಿಧ ವ್ಯಕ್ತಿಗಳ ವಿವರಗಳು ಸೇರಿವೆ. ನೀಟ್ ವಿದ್ಯಾರ್ಥಿಗಳು, ಶ್ರೀಮಂತ ವ್ಯಕ್ತಿಗಳು, ವಿಮಾದಾರರು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರ ಡೇಟಾ ಮತ್ತು ಮೊಬೈಲ್ ಸಂಖ್ಯೆಗಳು ಕೂಡ ಆರೋಪಿ ಬಳಿ ಇದ್ದವು.
ಆರೋಪಿಯಿಂದ ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳು ಮತ್ತು ಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ನೂರಕ್ಕೂ ಹೆಚ್ಚು ವಿಭಾಗಗಳ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಹರಿಯಾಣದ ಫರಿದಾಬಾದ್‌ನಲ್ಲಿ InspireWebz ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಕ್ಲೌಡ್ ಡ್ರೈವ್ ಲಿಂಕ್‌ಗಳ ಮೂಲಕ ಗ್ರಾಹಕರಿಗೆ ಡೇಟಾ ಮಾರಾಟ ಮಾಡುತ್ತಿದ್ದ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top