ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ

ಭಟ್ಕಳ: ಕಾರುಗಳೆರಡರ ನಡುವೆ ನಡೆದ ಅಪಘಾತದಲ್ಲಿ ಆರು ಮಂದಿ ಗಾಯಗೊಂಡು, ಎರಡೂ ಕಾರುಗಳು ಜಖಂ ಆದ ಘಟನೆ ವೆಂಕ್ಟಾಪುರ ಸೇತುವೆ ಸಮೀಪದ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ನಡೆದಿದೆ.

ಗಾಯಾಳುಗಳನ್ನು ಹಾವೇರಿ ಮೂಲದ ಬೀಮಪ್ಪ ಹನುಮಂತಪ್ಪ ಗಣಜೂರು, ಮೊಹಮ್ಮದ್ ಮುಶಾಫರ್ (26), ಪೌಜಿಯಾ ಎ., ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ಸ್ (19) ಎಂದು ಗುರುತಿಸಲಾಗಿದೆ.

ಹಾವೇರಿಯಿಂದ ಬಂಟ್ವಾಳದತ್ತ ಹೋಗುತ್ತಿದ್ದ ಕಾರಿಗೆ ಭಟ್ಕಳದಿಂದ ಹೊನ್ನಾವರದತ್ತ ಹೋಗುತ್ತಿದ್ದ ಕಾರು ಗುದ್ದಿದೆ. ಹೊನ್ನಾವರದತ್ತ ಹೋಗುತ್ತಿದ್ದ ಕಾರಿನ ಚಾಲಕನ ಅತಿ ವೇಗದ ಚಾಲನೆ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.





















































 
 

ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬ್ಯುಲೆನ್ಸ್‌ ಸೂಕ್ತ ಸಮಯಕ್ಕೆ ಬಾರದ ಕಾರಣ ಪೊಲೀಸರ ಗಸ್ತು ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ಸಮಯದಲ್ಲಿ ಎರಡೂ ಕಾರಿನಲ್ಲಿದ್ದ ‌ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದ್ದ ಕಾರಣ ಮತ್ತು ಕಾರುಗಳ ಏರ್‌ ಬ್ಯಾಗ್ ತೆರೆದುಕೊಂಡ ‌ಕಾರಣ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೂ, ಅಪಾಯದಿಂದ ಪಾರಾಗಿದ್ದಾರೆ‌.

ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಡಿದ್ದಾರೆ.

error: Content is protected !!
Scroll to Top