ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್‌ ಪ್ರಮಾಣ ವಚನ ಸ್ವೀಕಾರ

20 ಸಚಿವರ ಮಂತ್ರಿಮಂಡಲ ರಚನೆ

ತಿರುವನಂತಪುರಂ : ಕೇರಳಂ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕಾಂಗ್ರೆಸ್‌ನ ವಿ.ಡಿ.ಸತೀಶನ್ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು. ಜೊತೆಗೆ 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್​​ ನೇತೃತ್ವದ ಯುಡಿಎಫ್, ನೂತನ ಸಿಎಂ ಆಗಿ ವಿಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ.

ಕಾಂಗ್ರೆಸ್​ನಿಂದ 11 ಮಂದಿ, ಮುಸ್ಲಿಂ ಲೀಗ್​ನ ಐವರು ಹಾಗೂ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್), ಮತ್ತು ಸಿಪಿ ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷ) ಅವರಿಗೂ ಅವಕಾಶ ಮಾಡಿಕೊಡಲಾಗಿದೆ. ಕಾಂಗ್ರೆಸ್​ನಿಂದ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ.ಮುರಳೀಧರನ್, ಎ.ಪಿ.ಅನಿಲ್ ಕುಮಾರ್, ಪಿ.ಸಿ.ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ ಲಿಜು, ಟಿ ಸಿದ್ದಿಕ್, ಕೆ ಎ ತುಳಸಿ ಮತ್ತು ಒ ಜೆ ಜನೀಶ್ ಸಚಿವರಾಗಲಿದ್ದಾರೆ.





















































 
 
error: Content is protected !!
Scroll to Top