ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ವರುಣ ಕೃಪೆಗಾಗಿ ಸಾಮೂಹಿಕ ಸೀಯಾಳ ಅಭಿಷೇಕವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಂತೆ ನಡೆಯಿತು.
ಕ್ಷೇತ್ರದ ಆಡಳಿತ ಸೇವಾ ಟ್ರಸ್ಟಿನ ಉಪಾಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪೈ, ಟ್ರಸ್ಟಿಗಳಾದ ರಾಮಣ್ಣಗೌಡ, ಉಮೇಶ್ ಗಿರಿಗುಡ್ಡೆ, ವಿಜಯಲಕ್ಷ್ಮಿ ರೈ, ವಿಶ್ವನಾಥ ಗೌಡ ಆಲಡ್ಕ, ಮೋನಪ್ಪ ಗೌಡ ಮತ್ತು ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದೇವಳದ ಪ್ರಧಾನ ಅರ್ಚಕ ಗುರುಪ್ರಸಾದ್ ನೂರಿತ್ತಾಯ ಸೀಯಾಳ ಅಭಿಷೇಕ ಸಮರ್ಪಿಸಿದರು, ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ್ ಬಾರ್ಯ ಪ್ರಾರ್ಥನೆ ಸಲ್ಲಿಸಿದರು. ರಾಜೇಶ್ ಬಾರ್ಯ ಸಹಕರಿಸಿದರು.
























