ಹಾರ್ಮುಜ್‌ನಲ್ಲಿ ಭಾರತಕ್ಕೆ ತೊಂದರೆಯಾಗುವುದಿಲ್ಲ : ಇರಾನ್‌ ಭರವಸೆ

ವಿದೇಶಾಂಗ ಸಚಿವರಾದ ಸಚಿವ ಎಸ್ ಜೈಶಂಕರ್-ಸೈಯದ್ ಅಬ್ಬಾಸ್ ಆರಾಘ್ಚಿ ಭೇಟಿ

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಆರಾಘ್ಚಿ ಭರವಸೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಆರಾಘ್ಚಿ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಸ್ನೇಹಪರ ರಾಷ್ಟ್ರಗಳು ವ್ಯಾಪಾರ ಮತ್ತು ಸಾಗಾಣಿಕೆ ಭದ್ರತೆಗಾಗಿ ಇರಾನ್ ಮೇಲೆ ನಂಬಿಕೆ ಇಡಬಹುದು ಎಂದು ಹೇಳಿದರು.





















































 
 

‘ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಂತ ಮಹತ್ವದ Strait of Hormuz ಪ್ರದೇಶದ ಭದ್ರತೆಯ ರಕ್ಷಕರಾಗಿ ಇರಾನ್ ತನ್ನ “ಐತಿಹಾಸಿಕ ಕರ್ತವ್ಯ”ವನ್ನು ಮುಂದುವರಿಸುತ್ತದೆ ಎಂದರು. ಇದೇ ವಿಚಾರವಾಗಿ Xನಲ್ಲಿ ಪೋಸ್ಟ್‌ ಮಾಡಿದ ಅರಾಗ್ಛಿ, ‘ಜೈಶಂಕರ್ ಅವರೊಂದಿಗೆ ನಡೆದ ಚರ್ಚೆಗಳು ಪ್ರಾದೇಶಿಕ ಬೆಳವಣಿಗೆಗಳ ಕುರಿತಾಗಿದ್ದು, ಜಲಮಾರ್ಗದ ಮೂಲಕ ಸುರಕ್ಷಿತ ವಾಣಿಜ್ಯ ಸಂಚಾರವನ್ನು ಖಚಿತಪಡಿಸುವಲ್ಲಿ ಇರಾನ್‌ನ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕದ ವಿರುದ್ಧ ವಾಗ್ದಾಳಿ ಮಾಡಿದ ಅವರು, ‘ಅಮೆರಿಕದ ದಬ್ಬಾಳಿಕೆಗೆ ಇರಾನ್ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ಅಮೆರಿಕದ ಒತ್ತಡಕ್ಕೆ ಇರಾನ್ ನೀಡುತ್ತಿರುವ ಪ್ರತಿರೋಧ ಹೊಸದೇನಲ್ಲ. ಇಂತಹ ಸವಾಲುಗಳನ್ನು ಎದುರಿಸುತ್ತಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ನೀಡಿದರು.

ಮತ್ತೊಂದು ಪೋಸ್ಟ್‌ನಲ್ಲಿ, ಇಂತಹ ಒತ್ತಡಗಳನ್ನು ಎದುರಿಸುತ್ತಿರುವ ದೇಶಗಳು ಒಟ್ಟಾಗಿ ಕೆಲಸ ಮಾಡಿ, ಇಂತಹ ನೀತಿಗಳನ್ನು “ಇತಿಹಾಸದ ಕಸದ ಬುಟ್ಟಿಗೆ” ತಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಬ್ರಿಕ್ಸ್ ಸಭೆಯಲ್ಲಿ ಇರಾನ್ ಪರವಾಗಿ ಭಾಷಣ ಮಾಡಿದ ಅರಾಗ್ಚಿ, ‘ಪಾಶ್ಚಾತ್ಯ ಪ್ರಾಬಲ್ಯವನ್ನು ಮುರಿಯುವ ಅಗತ್ಯವಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕೆಂದು ಹೇಳಿದರು.

error: Content is protected !!
Scroll to Top