ಬೆಳ್ತಂಗಡಿ: ಪೊಲೀಸ್‌ ಸಿಬ್ಬಂದಿ ಮನೆಯಲ್ಲಿ 14 ಲ.ರೂ. ಮೌಲ್ಯದ ನಗ-ನಗದು ಕಳ್ಳತನ

ಪೊಲೀಸ್‌ ಸಿಬ್ಬಂದಿ ಮನೆಯಲ್ಲಿರುವಾಗಲೇ ಕೈ ಚಳಕ ತೋರಿಸಿದ ಕಳ್ಳರು

ಬೆಳ್ತಂಗಡಿ: ಪದ್ಮುಂಜದ ಗಾಡಕೋಡಿ ಎಂಬಲ್ಲಿ ಬೆಳ್ತಂಗಡಿ ಪೋಲೀಸ್ ಸಿಬ್ಬಂದಿ ಕರುಣಾಕರ ಗೌಡ ಎಂಬವರ ಮನೆಯಲ್ಲಿ ಮೇ 15ರಂದು ರಾತ್ರಿ ಕಳವಾಗಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸುಮಾರು 13 ಲಕ್ಷ ರೂಪಾಯಿ ವೆಚ್ಚದ ಚಿನ್ನಾಭರಣ ಒಂದು ಲಕ್ಷ ರೂಪಾಯಿ ನಗದು ಕಳುವಾಗಿದೆ ಎಂದು ದೂರು ನೀಡಿಲಾಗಿದೆ . ಮನೆಯ ಒಡೆಯ ಕರುಣಾಕರ ಮನೆಯಲ್ಲಿ ಒಬ್ಬರೇ ಇದ್ದು ಪತ್ನಿ ಮಕ್ಕಳು ಬೆಂಗಳೂರಿನಲ್ಲಿ ಇದ್ದರು ಎಂದು ತಿಳಿದುಬಂದಿದೆ.





















































 
 

ಕರುಣಾಕರ ರಾತ್ರಿ ಒಂದು ಗಂಟೆಯವರೆಗೂ ಎಚ್ಚರಿಕೆಯಲ್ಲಿದ್ದು ಬೆಳಿಗ್ಗೆ ಏಳುವರೆ ಗಂಟೆಗೆದ್ದು ನೋಡುವಾಗ ಬಾಗಿಲಿನ ಚಿಲಕ ತೆರೆದಿರುವುನ್ನು ನೋಡಿ ಸಂಶಯಗೊಂಡ ಕರುಣಾಕರ ಗೌಡರು ಪರಿಶೀಲಿಸಿದಾಗ ಮನೆಯೊಳಗೆ ಕಳವಾಗಿರುವುದು ತಿಳಿದುಬಂದಿದೆ.

ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಠಾಣಾಧಿಕಾರಿ ಕೌಶಿಕ್ ಬಿ ಸಿ. ಬೆಳ್ತಂಗಡಿ ವೃತ್ತ ನಿರೀಕ್ಷಕರು ರವಿ ಬಿ ಎಸ್ ರವರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top