ಇಸ್ಲಾಮಿಕ್ ಸ್ಟೇಟ್‌ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಖತಂ

ಅಮೆರಿಕ ಮತ್ತು ನೈಜೀರಿಯಾ ಪಡೆಗಳ ಜಂಟಿ ಕಾರ್ಯಾಚರಣೆ

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಯ ಎರಡನೇ ಪ್ರಮುಖ ಕಮಾಂಡರ್‌ನನ್ನು ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಪ್ರಕಟಿಸಿದ್ದಾರೆ. ಅತ್ಯಂತ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅಬು-ಬಿಲಾಲ್ ಅಲ್-ಮಿನುಕಿ ಸಾವಿನೊಂದಿಗೆ ಜಾಗತಿಕ ಮಟ್ಟದಲ್ಲಿ ಐಎಸ್ ಸಂಘಟನೆಯ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ.

ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್, ನೈಜೀರಿಯಾದಲ್ಲಿ ನಡೆದ ಈ ಕಾರ್ಯಾಚರಣೆಯನ್ನು “ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾದ” ಮತ್ತು “ಅತಿ ಸಂಕೀರ್ಣವಾದ ಮಿಷನ್” ಎಂದು ಬಣ್ಣಿಸಿದ್ದಾರೆ.





















































 
 

“ನನ್ನ ನಿರ್ದೇಶನದ ಮೇರೆಗೆ, ಅಮೆರಿಕದ ಶೌರ್ಯಶಾಲಿ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾಗಿದ್ದ ಸಂಕೀರ್ಣ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ವಿಶ್ವದ ಅತ್ಯಂತ ಸಕ್ರಿಯ ಉಗ್ರನನ್ನು ಯುದ್ಧಭೂಮಿಯಿಂದ ಮುಕ್ತಗೊಳಿಸಲಾಗಿದೆ,” ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

“ಅವನು ಇನ್ನು ಮುಂದೆ ಆಫ್ರಿಕಾದ ಜನರನ್ನು ಭಯಭೀತರನ್ನಾಗಿ ಮಾಡಲು ಅಥವಾ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಯೋಜಿಸಲು ಬದುಕಿರುವುದಿಲ್ಲ. ಅವನ ನಿರ್ಮೂಲನೆಯೊಂದಿಗೆ, ಐಸಿಸ್‌ನ ಜಾಗತಿಕ ಕಾರ್ಯಾಚರಣೆಗಳು ಗಣನೀಯವಾಗಿ ಕುಂಠಿತಗೊಂಡಿವೆ,” ಎಂದು ಅವರು ಹೇಳಿದ್ದಾರೆ.

ಯಾರು ಈ ಅಬು-ಬಿಲಾಲ್ ಅಲ್-ಮಿನುಕಿ?

ಅಬು ಬಕರ್ ಮುಹಮ್ಮದ್ ಅಲಿಯಾಸ್‌ ಅಲ್-ಮೈನುಕಿ ಎಂದೂ ಈತನನ್ನು ಕರೆಯಲಾಗುತ್ತಿತ್ತು. ‘ಕೌಂಟರ್ ಎಕ್ಸ್‌ಟ್ರೆಮಿಸಂ ಪ್ರಾಜೆಕ್ಟ್’ ವರದಿಯ ಪ್ರಕಾರ, ಈತ ಪ್ರಮುಖವಾಗಿ ಆಫ್ರಿಕಾದ ಸಹೇಲ್ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದ. ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕಾ ಪ್ರಾವಿನ್ಸ್ ಹಿರಿಯ ಕಮಾಂಡರ್ ಆಗಿ ಅತ್ಯಂತ ರಹಸ್ಯವಾಗಿ ಈತ ಕಾರ್ಯಾಚರಣೆ ನಡೆಸುತ್ತಿದ್ದ.

ಜಾಗತಿಕ ಮಟ್ಟದಲ್ಲಿ ನಿಧಿ ಸಂಗ್ರಹಣೆ ಮತ್ತು ಇಸ್ಲಾಮಿಕ್ ಸ್ಟೇಟ್‌ನ ಉಗ್ರಗಾಮಿ ಕೋಶಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಅಮೆರಿಕದ ವಿದೇಶಾಂಗ ಇಲಾಖೆಯು ಜೂನ್ 2023ರಲ್ಲಿ ಈತನನ್ನು ‘ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿತ್ತು.

error: Content is protected !!
Scroll to Top