ಉಪ ಚುನಾವಣೆ ಅಭ್ಯರ್ಥಿ ಹಾವು ಕಡಿದು ಸಾವು

ಬಹಿರ್ದೆಸೆಗೆ ಹೋದಾಗ ಕಚ್ಚಿದ ಹಾವು

ಕಾರವಾರ: ಗೋವಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೇತನ್ ಭಾಟಿಕರ್ ನಾಗರಹಾವು ಕಡಿದು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಬಳಿ ಹಾವು ಕಡಿದು ಭಾಟಿಕರ್‌ ಮೃತಪಟ್ಟಿದ್ದಾರೆ. ಅವರು ಗೋವಾದ ಪೊಂಡಾದಿಂದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಬಳಿಯ ಅನಮೋಡ್ ಬಳಿ ಪಕ್ಷದ ಕಾರ್ಯ ನಿಮಿತ್ತ ಸ್ನೇಹಿತನೊಂದಿಗೆ ಬಂದಿದ್ದರು.

ಮೂತ್ರ ವಿಸರ್ಜನೆಗಾಗಿ ಅನಮೋಡ್ ಘಟ್ಟ ಭಾಗದ ಕಾಡಿನಲ್ಲಿ ಕಾರು ನಿಲ್ಲಿಸಿ ತೆರಳಿದ್ದರು. ಮೂತ್ರ ವಿಸರ್ಜಿಸುವ ವೇಳೆ ನಾಗರಹಾವು ಕಡಿದಿದೆ. ತಕ್ಷಣ ಗೋವಾದ ಜಿಎಮ್‌ಸಿ ಮೆಡಿಕಲ್ ಕಾಲೇಜಿನ (ಬಾಂಬೋಲಿನ್) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.





















































 
 

ಘಟನೆ ಸಂಬಂಧ ಕೋಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವಾ ರಾಜ್ಯದ ಪೊಂಡಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಗೋವಾದ ಕೃಷಿ ಸಚಿವ ರವಿ ನಾಯ್ಕ ಅಕಾಲಿಕ ನಿಧನದಿಂದ ತೆರವಾಗಿದ್ದ ಪೊಂಡಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು.

error: Content is protected !!
Scroll to Top