ದರ್ಶನ್‌ಗೆ ಇನ್ನೂ ಒಂದು ವರ್ಷ ಜೈಲು ವಾಸ

ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಕೊಲೆ ಪ್ರಕರಣದ ಆರೋಪಿ ಚಿತ್ರನಟ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸುಪ್ರೀಂಕೋರ್ಟ್‌ನಲ್ಲಿ ಇಂದು ನಟ ದರ್ಶನ್ ಅರ್ಜಿ ವಿಚಾರಣೆ ನಡೆಸಿದ್ದು, ಅರ್ಜಿ ವಜಾಗೊಳಿಸಲಾಗಿದೆ. ಸಾಕ್ಷಿ ವಿಚಾರಣೆಗೆ 1 ವರ್ಷ ಕಾಲಾವಧಿಯನ್ನು ಸುಪ್ರೀಂ ಕೊರ್ಟ್ ನೀಡಿದೆ. ಹೀಗಾಗಿ 1 ವರ್ಷ ಜೈಲುವಾಸ ಕಾಯಂ ಆದಂತೆ ಆಗಿದೆ. ಇದರ ಬಳಿಕ ಜಾಮೀನು ಅರ್ಜಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾಕ್ಷಿ ವಿಚಾರಣೆಯಲ್ಲಿ ಪ್ರಗತಿಯಾಗದಿದ್ದರೆ, ವಿಳಂಬವಾದರೆ ಮತ್ತೆ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೊರ್ಟ್ ಹೇಳಿದೆ.

8-9 ತಿಂಗಳಿಂದ ಸೆಷನ್ಸ್ ಕೋರ್ಟ್‌ನಲ್ಲಿ ಆಗುತ್ತಿರುವ ಲೋಪದೋಷಗಳ ಬಗ್ಗೆ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ದರ್ಶನ್ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂ ಕೊರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.





















































 
 

ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ಮುಗಿಸಿ ಎಂದು ನಾವು ಕೇಳಿದ್ದೇವೆ. ಆದರೆ ಮುಖ್ಯ ಸಾಕ್ಷಿಗಳ ವಿಚಾರಣೆಯನ್ನೇ ಇದುವರಿಗೂ ಮುಕ್ತಾಯ ಮಾಡಿಲ್ಲ. ನವೆಂಬರ್ 3ರಂದು ದೋಷಾರೋಪ ಹೊರಿಸಲಾಗಿದ್ದು, 7 ತಿಂಗಳಲ್ಲಿ ಈ ವರೆಗೆ ಕೇವಲ 10 ಸಾಕ್ಷಿಗಳ ವಿಚಾರಣೆ ಅಷ್ಟೇ ನಡೆದಿದೆ. 263 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಸಾಕಷ್ಟು ವಿಳಂಬ ಮಾಡಲಾಗ್ತಿದೆ. ಸಾಕ್ಷಿಗಳ ವಿಚಾರದಲ್ಲಿ ಏನು ಮಾಡಲಾಗಿದೆ ಎಂದಿದ್ದಾರೆ. 70 ಬಾರಿ ಕುಟುಂಬದವರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ ಎಂದು ವಿವರ ಹೇಳಿದ್ದಾರೆ.

error: Content is protected !!
Scroll to Top