ಇಂದಿರಾ ಗಾಂಧಿ ಊಟ, ಟೀ ಬಿಡಿ ಎಂದಿದ್ದನ್ನು ಮರೆತಿದ್ದಿರಾ?: ಕಾಂಗ್ರೆಸ್‌ಗೆ ದೇವೇಗೌಡ ತಿರುಗೇಟು

ಮೋದಿ ಬಗ್ಗೆ ಹಗುರ ಮಾತು ಬೇಡ ಎಂದು ಎಚ್ಚರಿಕೆ

ಹಾಸನ: ಜಾಗತಿಕ ಮಟ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಳಕೆ ತಗ್ಗಿಸಿ, ಚಿನ್ನ ಖರೀದಿ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬಗ್ಗೆ ಕಾಂಗ್ರೆಸ್‌ ನಾಯಕರ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನಾಗಪುರದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ವಾರದಲ್ಲಿ ಒಂದು ದಿನ ಊಟ, ಟೀ ಕುಡಿಯುವುದನ್ನು ಬಿಡಿ ಎಂದು ಬಹಿರಂಗ ಹೇಳಿಕೆ ನೀಡಿರುವ ವಿಚಾರವನ್ನು ಕಾಂಗ್ರೆಸ್‌ ನಾಯಕರು ಮರೆತಿದ್ದಾರೆಯೇ? ಎಂದು ಕೇಳಿದ್ದಾರೆ.

ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ ಮಿತವಾಗಿ ಬಳಸಿ, ಚಿನ್ನ ಆಮದು ಹಿನ್ನೆಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಖರೀದಿಸಬೇಡಿ ಎಂದಿರುವುದು ತಪ್ಪೇ? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿಗಳು. ಹಲವು ಬಾರಿ ಬಜೆಟ್‌ ಮಂಡಿಸಿದವರು. ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕಿ ಎಂದು ವಿನಂತಿಸುತ್ತೇನೆ ಅಷ್ಟೆ. ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರು. ಅವರ ಬಗ್ಗೆ ಲಘುವಾಗಿ ಮಾತನಾಡಿದರೆ 168 ಕೋಟಿ ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದರು.





















































 
 
error: Content is protected !!
Scroll to Top