ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ರಿ. ಉಪ್ಪಿನಂಗಡಿ ನಡೆಸುತ್ತಿರುವ ಶ್ರೀ ಮಹಾಭಾರತ ಸರಣಿಯ 114ನೇ ಕಾರ್ಯಕ್ರಮದಲ್ಲಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ರಚಿತ ವಿಷಮ ದಾಂಪತ್ಯ ತಾಳಮದ್ದಳೆ ಜರಗಿತು.

ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್ .ಬಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ಭಾಸ್ಕರ ಬಾರ್ಯ (ಉದ್ದಾಲಕ 1) ಶ್ರೀಧರ ಎಸ್. ಪಿ ಕೃಷ್ಣಾಪುರ (ಉದ್ದಾಲಕ 2) ದಿವಾಕರ ಆಚಾರ್ಯ ಗೇರುಕಟ್ಟೆ( ಚಂಡಿ 1) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಚಂಡಿ 2) ಬಿ. ಸುಬ್ರಹ್ಮಣ್ಯ ರಾವ್ (ಕೌಂಡಿನ್ಯ ಮುನಿ) ಪೂರ್ಣಿಮಾ ಪುತ್ತೂರಾಯ ಮತ್ತು ಮಾಸ್ಟರ್ ಸುಶಾಂತ್ (ವಿಪ್ರರು) ಭಾಗವಹಿಸಿದ್ದರು.
ಪೂರ್ಣಿಮಾ ರಾವ್ ಬೆಳ್ತಂಗಡಿ ಸ್ವಾಗತಿಸಿ ಗೀತಾ ಕುದ್ದಣ್ಣಾಯ ವಂದಿಸಿದರು
























