ಮನೆಯ ಅಂಗಳದಲ್ಲೇ ನೇಣು ಹಾಕಿಕೊಂಡು ವೃದ್ಧ ಆತ್ಮಹತ್ಯೆ

ಬೆಳ್ತಂಗಡಿ : ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯ ಅಂಗಳಕ್ಕೆ ಅಳವಡಿಸಿದ್ದ ಶಿಟಿನ ಚಪ್ಪರದ ರಾಡ್‌ಗೆ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಜೋಡುಸ್ನಾನದ ಅಗುಳೆ ನಿವಾಸಿ ಐತಪ್ಪ ಪೂಜಾರಿ (68) ಎಂಬವರು ಮೇ 6ರಂದು ರಾತ್ರಿ 11 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆ ಒಳಗಡೆ ಮನೆಯ ಹೊರಗೆ ಅಳವಡಿಸಿದ್ದ ರಾಡ್‌ಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐತಪ್ಪ ಪೂಜಾರಿಯವರ ಸೊಸೆ ಬೆಳಗ್ಗೆ 6 ಗಂಟೆಗೆ ಎದ್ದು ಮನೆಯ ಅಂಗಳಕ್ಕೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.





















































 
 
error: Content is protected !!
Scroll to Top