ಗೇರುಕಟ್ಟೆಯಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

ಗೇರುಕಟ್ಟೆ: ಕೀರ್ತಿಶೇಷ ಆರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಹಯೋಗದಿಂದ
ಎಂ. ವಿ. ಪ್ರತಿಷ್ಠಾನ ಗೇರುಕಟ್ಟೆ ಆಯೋಜಿಸಿದ ಭಾರವಿ ಬೇಸಿಗೆ ಶಿಬಿರದ ಸಮಾರೋಪವು ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆಯಲ್ಲಿ ಜರಗಿತು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸುಮಾರು 37 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಎ. 30 ರಂದು ನಿವೃತ್ತರಾದ ಗುಣರತ್ನ ಆಚಾರ್ಯ ಕಾವೂರು ಇವರನ್ನು ಗೌರವಿಸಲಾಯಿತು.

ಮುಖ್ಯಅತಿಥಿ ಯೋಗಪಟು ಸತೀಶ್ ಭಂಡಾರಿ ಶಿಬಿರದಲ್ಲಿ ನಡೆಸಲಾದ ವಿವಿಧ ಚಟುವಟಿಕೆ ವಿಭಿನ್ನವಾಗಿದ್ದು ಉಪಯುಕ್ತವಾಗಿದೆ . ಒಂದು ಸಣ್ಣ ಪ್ರಯತ್ನವು ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂಬುದಕ್ಕೆ ಈ ಶಿಬಿರವು ಸಾಕ್ಷಿಯಾಗಿದೆ ಎಂದರು. ಪೋಷಕರಾದ ಹರೀಶ್ ಆಚಾರ್ಯ ಕಣಿಯೂರು ಮತ್ತು ರೇವತಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.





















































 
 

ಪ್ರತಿಷ್ಠಾನದ ಸದಸ್ಯರಾದ ಪ್ರಭಾಕರ ಆಚಾರ್ಯ, ರಾಜೇಶ ಆಚಾರ್ಯ, ಹರೀಶ ಆಚಾರ್ಯ, ರಂಜೀತ್ ಮೂಡಬಿದಿರೆ, ವಸಂತ ಆಚಾರ್ಯ ಉಪಸ್ಥಿತರಿದ್ದರು.

ಪೇಪರ್ ಕ್ರಾಫ್ಟ್ ಪ್ರಾತ್ಯಕ್ಷಿಕೆಯನ್ನು ಶರ್ಮಿಳಾ ರಾಜೇಶ್ ಮಂಗಳೂರು, ಗೀತ ಗಾಯನ ಮತ್ತು ಒಗಟುಗಳ ಬಗ್ಗೆ ರೇವತಿ ಮೇಗರವಳ್ಳಿ, ಯೋಗದ ಪ್ರಾಥಮಿಕ ಮಾಹಿತಿ ಬಗ್ಗೆ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ.ಯಲ್., ಮಹಾಭಾರತ ರಸಪ್ರಶ್ನೆ, ದೇಸೀಯ ಆಟ, ಕಸದಿಂದ ರಸ, ಹೂಗುಚ್ಚ ತಯಾರಿ ಮೊದಲಾದ ಚಟುವಟಿಕೆಗಳನ್ನು ಪ್ರೇಶೀತ, ವಾಣಿ, ಗೀತಾ ಡಿ., ಸ್ವಾತಿ ಮೂಡಬಿದಿರೆ, ಇಶಾನ್ ನಡೆಸಿಕೊಟ್ಟರು.

ಮನೆ ಬಳಕೆಯ ಪುರಾತನ ವಸ್ತುಗಳು , ವಿವಿಧ ದೇಶದ ನೋಟುಗಳು ಮತ್ತು ನಾಣ್ಯಗಳ ಪ್ರದರ್ಶನ , ಸ್ಮರಣಶಕ್ತಿ ಪರೀಕ್ಷೆ, ಶಿಬಿರಾರ್ಥಿಗಳಿಂದ ವೈಯಕ್ತಿಕ ಪ್ರತಿಭಾ ಪ್ರದರ್ಶನ ನಡೆಸಲಾಯಿತು.

ಗೇರುಕಟ್ಟೆ, ಕೊರಂಜ ಪರಿಸರದ 20 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ಭಾಗವಹಿಸಿದ ಪೋಷಕರಿಗೂ ಸಂಸ್ಕಾರ ಬಿಂದು ಪುಸ್ತಕವನ್ನು ನೀಡಲಾಯಿತು

ವಾಣಿ ಹರೀಶ ಆಚಾರ್ಯ ಸ್ವಾಗತಿಸಿ ಪ್ರೇಷಿತ ರಾಜೇಶ್ ವಂದಿಸಿದರು. ಪ್ರತಿಷ್ಠಾನದ ಸಂಚಾಲಕಿ ಭಾರತಿ ಎಂ.ಎಲ್. ನಿರೂಪಿಸಿದರು.

ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ರಿ. ಉಪ್ಪಿನಂಗಡಿ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಗೇರುಕಟ್ಟೆ ಸಹಕಾರ ನೀಡಿದವು.

error: Content is protected !!
Scroll to Top