ಮೂರು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ

ವಿಜಯಪುರ: ಬೀದಿ ನಾಯಿಯೊಂದು ಮೂರು ವರ್ಷದ ಮಗುವಿನ ಮೇಲೆ ದಾಳಿ ಮಾಡಿ, ಕಟ್ಟಿಕೊಂಡು ಹೋಗಿದ್ದು, ಸ್ಥಳೀಯರಿಂದಾಗಿ ಮಗುವಿನ ಪ್ರಾಣ‌ ಉಳಿದ ಘಟನೆ ರಾಜಕುಮಾರ್ ಲೇ‌ಔಟ್‌ನಲ್ಲಿ ‌ನಡೆದಿದೆ.

ನಾಯಿ ದಾಳಿಗೆ ತುತ್ತಾದ ಬಾಲಕನನ್ನು ವಿರಾಜ್ ‌ಸಂತೋಷ್ ಬಿರಾದಾರ್ ಎಂದು ಗುರುತಿಸಲಾಗಿದೆ.

ವಿರಾಜ್ ‌ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಬೀದಿ ನಾಯಿ ಅಟ್ಯಾಕ್ ಮಾಡಿದೆ. ಮಾತ್ರವಲ್ಲದೆ ಸುಮಾರು 100 ಮೀ. ದೂರದ ವರೆಗೆ ಮಗುವನ್ನು ಕಚ್ಚಿ ಎಳೆದೊಯ್ದಿದೆ. ಈ ವೇಳೆ ಸ್ಥಳೀಯರು ಕಿರು ಚಿ, ಕೂಗಾಡಿದ ‌ಪರಿಣಾಮ ಮಗುವನ್ನು ಅಲ್ಲೇ ಬಿಟ್ಟು ನಾಯಿ ಓಡಿ ಹೋಗಿದೆ.





















































 
 

ನಾಯಿ ಕಚ್ಚಿ ಮಗುವಿನ ತೊಡೆಯ ಭಾಗಕ್ಕೆ ಗಾಯಗಳಾಗಿವೆ. ಸದ್ಯ ವಿರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

error: Content is protected !!
Scroll to Top