ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಜೀಪು ಚಾಲಕನ ಮೇಲೆ ವಾಮಾಚಾರ: ದೂರು ದಾಖಲು

ಚಿಕ್ಕಮಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ‌ಮನೆಯ ಮುಂದೆ ವಾಮಾಚಾರ ನಡೆಸಿರುವ ಘಟನೆ ಬಾಳೇಹೊನ್ನೂರಿನಲ್ಲಿ ನಡೆದಿದೆ.

ಎಸಿಎಫ್ ಮೋಹನ್ ಮತ್ತು ಜೀಪು ಚಾಲಕನನ್ನು ಗುರಿಯಾಗಿಸಿ ಈ ವಾಮಾಚಾರ ನಡೆಸಲಾಗಿದೆ.

ಅನಾಮಧೇಯ ವ್ಯಕ್ತಿಗಳು ಮೋಹನ್ ಅವರ ಮನೆಯ ಗೇಟಿನ‌ ಮುಂದೆ ವಾಮಾಚಾರ ನಡೆಸಿರುವುದಾಗಿದೆ. ಮೋಹನ್ ಮತ್ತು ಚಾಲಕನ ಫೋಟೋ‌ಗಳನ್ನು ಮಣ್ಣಿನ ಮಡಿಕೆಯ ಒಳಗೆ ಇರಿಸಿ, ಅದಕ್ಕೆ ಅರಿಸಿನ ಕುಂಕುಮ ಹಾಕಿ ಬಳಿಕ ಅದನ್ನು ಒಡೆದು ಹಾಕಲಾಗಿದೆ. ಮೋಹನ್ ಅವರಿಗೆ ಇಂದು ಬೆಳಗ್ಗೆ ಈ ದೃಶ್ಯ ಕಂಡಿದ್ದು, ಅವರ ಮನೆಯವರನ್ನು ಆತಂಕಕ್ಕೆ ಈಡುಮಾಡಿದೆ.





















































 
 

ಈ ಕೃತ್ಯದ ಹಿಂದೆ ವೃತ್ತಿ ವೈಷಮ್ಯ ಅಥವಾ ಇತರೇ ಕಾರಣಕ್ಕಾಗಿ ಮೋಹನ್ ಮೇಲೆ ಅಸಮಾಧಾನ ಇರುವ ಕಚೇರಿ ಸಿಬ್ಬಂದಿ ಕೈವಾಡ ಇರುವ ಬಗ್ಗೆ ಅವರು ಸಂತೆ ವ್ಯಕ್ತ ಪಡಿಸಿದ್ದು, ಬಾಳೆಹೊನ್ನೂರು ಪೊಲೀಸರಿಗೂ ದೂರು ನೀಡಿದ್ದಾರೆ.

error: Content is protected !!
Scroll to Top