ಅಂಬುಲೆನ್ಸ್‌ ಡಿಕ್ಕಿಯಾಗಿ ರಿಕ್ಷಾ ಚಾಲಕ ಸಾವು

ಮೂಡುಬಿದಿರೆ : ಇಲ್ಲಿಗೆ ಸಮೀಪದ ಬನ್ನಡ್ಕ ಎಂಬಲ್ಲಿ ಅಂಬುಲೆನ್ಸ್ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಜಾನ್ ಕೊರೆಯಾ ಎಂಬವರು ಸ್ಥಳದಲ್ಲೇ ಮೃತಪಟ್ಟ ದುಘ೯ಟನೆ ಭಾನುವಾರ ನಡೆದಿದೆ.

ಬನ್ನಡ್ಕ ಮಠದಲ್ಲಿ ನಡೆಯುತ್ತಿದ್ದ ಸಮಾರಂಭವೊಂದಕ್ಕೆ ಪ್ರಯಾಣಿಕರನ್ನು ಬಿಟ್ಟು ಆಟೋರಿಕ್ಷಾವನ್ನು ಹಿಂದಕ್ಕೆ (ರಿವರ್ಸ್) ತೆಗೆಯುತ್ತಿದ್ದ ಸಂದರ್ಭದಲ್ಲಿ, ಮೂಡುಬಿದಿರೆ ಕಡೆಯಿಂದ ಕಾರ್ಕಳಕ್ಕೆ ಅತಿವೇಗವಾಗಿ ತೆರಳುತ್ತಿದ್ದ ಅಂಬುಲೆನ್ಸ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಆಟೋ ರಿಕ್ಷಾದ ಮೇಲ್ಬಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಂಬುಲೆನ್ಸ್‌ನ ಮುಂಭಾಗ ಕೂಡ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

error: Content is protected !!
Scroll to Top