ಗೇರುಕಟ್ಟೆಯಲ್ಲಿ ಮಕ್ಕಳ ಪ್ರತಿಭಾ ಸಂಗಮ

ವಿದ್ಯಾರ್ಥಿಗಳು ಕಲಿಕೆಯೊಂದಿಗೆ ತಮ್ಮ ಅಂತರ್ಗತ ಶಕ್ತಿಯನ್ನು ವಿಕಾಸಗೊಳಿಸಲು ಬೇಸಿಗೆ ಶಿಬಿರವು ಪ್ರೇರಣೆಯನ್ನು ನೀಡುತ್ತದೆ. ಇಂದು ಶಿಕ್ಷಣವನ್ನು ಪಡೆಯುವುದು ಕಷ್ಟಕರವಾಗಿಲ್ಲ. ಆದರೆ ಶಿಕ್ಷಣವನ್ನು ಛಲ ಮತ್ತು ಪರಿಶ್ರಮದಿಂದ ಆರ್ಜಿಸುವ ಅಗತ್ಯವಿದೆಯೆಂದು ಕುಕ್ಕಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ಹಿರಿಯ ಶ್ರೇಣಿಯ ನಿವೃತ್ತ ಮುಖ್ಯ ಮುಖ್ಯೋಪಾಧ್ಯಾಯನಿ ಗುಣರತ್ನ ತಿಳಿಸಿದರು.

ಎಂ. ವಿ ಪ್ರತಿಷ್ಠಾನ ಗೇರುಕಟ್ಟೆ ಆಯೋಜಿಸಿದ ಭಾರವಿ ಬೇಸಿಗೆ ಶಿಬಿರ 2026 ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ರಂಜೀತ್ ಮೂಡಬಿದಿರೆ ಬಾಲ್ಯದಲ್ಲಿ ಭಾಗವಹಿಸಿದ ಬೇಸಿಗೆ ಶಿಬಿರದ ಧನಾತ್ಮಕ ಪರಿಣಾಮ ಮತ್ತು ಹೆತ್ತವರ ಬೆಂಬಲ ಅಮೂಲ್ಯವಾಗಿದ್ದು ಮಕ್ಕಳು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.





















































ಎಂ ವಿ ಪ್ರತಿಷ್ಠಾನದ ಸಂಚಾಲಕ
ದಿವಾಕರ ಆಚಾರ್ಯ ಗೇರುಕಟ್ಟೆ ನಿರಂತರವಾಗಿ ಈ ಶಿಬಿರವನ್ನು ನಡೆಸುವ ಯೋಜನೆಯಿದೆ ಎಂದರು.

 
 

ಪ್ರತಿಷ್ಠಾನದ ಸದಸ್ಯರಾದ ಪ್ರಭಾಕರ ಆಚಾರ್ಯ,ರಾಜೇಶ ಆಚಾರ್ಯ,ಭಾರತಿ ಯಂ.ಯಲ್ . ಪ್ರೇಶಿತಾ ,ವಾಣಿ ಹರೀಶ್, ಗೀತಾ ಸಹಕರಿಸಿದರು. ಪ್ರಥಮ ದಿನದ ಶಿಬಿರದಲ್ಲಿ ಯೋಗ, ಪೇಪರ್ ಕ್ರಾಫ್ಟ್ ಪ್ರಾತ್ಯಕ್ಷಿಕೆಯನ್ನು ಶರ್ಮಿಳಾ ರಾಜೇಶ್ ಮಂಗಳೂರು, ಗೀತ ಗಾಯನ ಮತ್ತು ಒಗಟುಗಳ ಬಗ್ಗೆ ರೇವತಿ ಮೇಗರವಳ್ಳಿ, ಶ್ರೀ ಮಹಾಭಾರತ ರಸಪ್ರಶ್ನೆಯನ್ನು ಪ್ರೇಶೀತ ಮತ್ತು ವಾಣಿ ಸಂಪನ್ಮೂಲ ವ್ಯಕ್ತಿಗಳಾಗಿ ನಡೆಸಿಕೊಟ್ಟರು.

ಶಿಬಿರಾರ್ಥಿ ಅದ್ರಿತ್ ಸ್ವಾಗತಿಸಿ ಆಬೀಶ್ ವಂದಿಸಿದರು..ಅದಿತಿ ಕಾರ್ಯಕ್ರಮ ನಿರೂಪಿಸಿದರು.ಅರ್ಕುಳ ಸುಬ್ರಾಯಾಚಾರ್ಯ ಪ್ರತಿಷ್ಠಾನ, ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ರಿ.ಉಪ್ಪಿನಂಗಡಿ ಶಿಬಿರಕ್ಕೆ ಸಹಕಾರವನ್ನು ನೀಡಿದ್ದರು.

error: Content is protected !!
Scroll to Top