ಗುತ್ತಿಗಾರಿನ ಯುವಕನನ್ನು ಕರೆದೊಯ್ಯಲು ಬಂದ ಆಂಧ್ರ ಪೊಲೀಸರು: ಸಾರ್ವಜನಿಕರಿಂದ ವಿರೋಧ

ಸುಳ್ಯ: ಆಂಧ್ರ ಪ್ರದೇಶದ ಪೊಲೀಸರು ಗುತ್ತಿಗಾರಿನ ಯುವಕನನ್ನೊಬ್ಬನನ್ನು ತಮ್ಮ ವಾಹನದಲ್ಲಿ ಎತ್ತಿ ಹಾಕಿಕೊಂಡು ಹೋಗಿದ್ದು, ಆತನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ತಿಳಿದ ಸಾರ್ವಜನಿಕರು ಆಂಧ್ರ ಪೊಲೀಸರ ವಾಹನ ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ. ಕೊನೆಗೆ ಸುಬ್ರಹ್ಮಣ್ಯ ಪೊಲೀಸ್‌‌ರು ಠಾಣೆಯಲ್ಲಿ ‌ನಡೆಸಿದ ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥವಾದ ಘಟನೆ ನಡೆದಿದೆ.

ಸಚಿನ್ ವಳಲಂಬೆ ಎಂಬ ಯುವಕ ಗುತ್ತಿಗಾರಿನಲ್ಲಿ ನಿನ್ನೆ ಸಂಜೆ ಇದ್ದಾಗ ಆಂಧ್ರ ಪೊಲೀಸರು ಆತನನ್ನು ತಮ್ಮ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ಸಚಿನ್‌ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಆತನ ಮಾವನಿಗೆ ಊರಿನ ಜನರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಸಚಿನ್ ಮಿತ್ರರು ಮತ್ತು ಊರಿನವರು ಆಂಧ್ರ ಪೊಲೀಸರ ವಾಹನವನ್ನು ಬೆನ್ನಟ್ಟಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಬಳಿಕ ಪೊಲೀಸರು ಮತ್ತು ಊರವರ ನಡುವೆ ಚರ್ಚೆ ನಡೆದಿದೆ.

ಈ ಮಧ್ಯೆ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಠಾಣೆಯಲ್ಲಿ ಮಾತುಕತೆ ನಡೆಸಿ, ಸಚಿನ್ ವಿಚಾರಣೆಗೆ ಕರೆದಾಗೆಲ್ಲಾ ಹಾಜರಾಗಬೇಕೆಂದು ಸೂಚಿಸಿ ಸಚಿನ್ ರನ್ನು ಬಿಟ್ಟು ಆಂಧ್ರ ಪೊಲೀಸರು ತೆರಳಿದ್ದಾರೆ.





















































 
 

ಸಚಿನ್ ಹೆಸರು ಆನ್ಲೆೈನಿ ಗೇಮ್ಸ್ ನಡೆಸುವ‌ ಟೆಕ್ಕಿಯ ಮೊಬೈಲ್‌ ನಲ್ಲಿ ಇದ್ದುದರಿಂದ ಆತ ವಿಚಾರಣೆ ನಡೆಸಲು ಆಂಧ್ರ ಪೊಲೀಸರು ಸುಳ್ಯಕ್ಕೆ ಬಂದಿದ್ದರು ಎಂಬ ಮಾಹಿತಿ ಇದೆ.

error: Content is protected !!
Scroll to Top