ಎರಡು ಮೀನುಗಾರ ತಂಡದ ನಡುವೆ ಹೊಡೆದಾಟ: ಪ್ರಕರಣ ದಾಖಲು

ಉಡುಪಿ: ಮೀನುಗಾರರ ಎರಡು ತಂಡಗಳ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿ ಹೊಡೆದಾಟ ನಡೆದ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ಜಯೇಶ್ ಕೋಟ್ಯಾನ್ ಎಂಬವರು ಬಾಕು ಉಳಿದಿರುವ ಹಣವನ್ನು ಕೇಳಿದ ಕಾರಣಕ್ಕೆ ಬೋಟ್ ಮಾಲೀಕ ಚೋಟಾ ಹರೀಶ್ ಎಂಬಾತನಿಗೆ ಹಲ್ಲೆ ಮಾಡಿದ್ದು, ಇವರಿಬ್ಬರ ನಡುವೆ ಹೊಡೆದಾಟ ನಡೆದಿದೆ. ಇಬ್ಬರೂ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಪ್ರಕರಣ ಇಷ್ಟಕ್ಕೇ ಮುಗಿಯದೆ, ಚಿಕಿತ್ಸೆ ಪಡೆಯುತ್ತಿದ್ದ ಜಯೇಶ್ ಮೇಲೆ ಚೋಟಾ ಹರೀಶನ ನಾಲ್ಕು ಮಂದಿ ಬೆಂಬಲಿಗರು ಹಲ್ಲೆ‌ ಮಾಡಿ ಪರಾರಿಯಾಗಿದ್ದಾರೆ.





















































 
 

ಘಟನೆಗೆ ಸಂಬಂಧಿಸಿದ ಹಾಗೆ ಮಲ್ಪೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top