ಪುತ್ತೂರು: ತನ್ನ ಮನೆಯ ಸಿಟೌಟ್ನಲ್ಲಿ ಕುಳಿತಿದ್ದಾಗ ಕೆಲವು ಜನರು ಬಂದು ಹಲ್ಲೆ ನಡೆಸಿದ್ದಾಗಿ ಈಶ್ವರಮಂಗಲದ ಪಡುವನ್ನೂರು ನಿವಾಸಿ ಮಹಮ್ಮದ್ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳಾದ ಅಬ್ದುಲ್ ರಹಮಾನ್, ಸಾಹುಲ್ ಹಮೀದ್, ಮಿಕ್ತಾದ್, ರಶೀದ್, ಮೊಯಿದು ಎಂಬವರು ಬಂದು ಅವಾಚ್ಯವಾಗಿ ನಿಂದಿಸುತ್ತಾ, ನಮ್ಮ ಹಣ ತಿಂದಿದ್ದೀಯಾ ಎಂದು ಗದರಿಸುತ್ತಾ, ನಮ್ಮ ಜಾಗ ಇದು, ಇಲ್ಲಿ ಕಾಂಪೌಂಡ್ ಕಟ್ಟುತ್ತೀಯಾ ಎಂದು ಬೈದು ಹಲ್ಲೆ ನಡೆಸಿದ್ದಾರೆ. ಈ ವೇಳೆ ನನ್ನ ಪತ್ನಿ ಸೆಫಿಯಾ ಬರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ ಆರೋಪಿಗಳು ಜೀವ ಬೆದರಿಕೆ ಸಹ ಹಾಕಿದ್ದಾಗಿ ತಿಳಿಸಿದ್ದಾರೆ. ಸದ್ಯ ಮಹಮ್ಮದ್ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

























