ನಕಲಿ ನಂಬರ್ ಬಳಸಿ ಕಾರು ಚಲಾಯಿಸಿದ ಹಬೀಬ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ನಕಲಿ ನಂಬರ್ ಪ್ಲೇಟ್ ಬಳಸಿ ಕಾರು ಚಲಾಯಿಸಿದ ವ್ಯಕ್ತಿಯೊಬ್ಬರ ‌ವಿರುದ್ದ ಪುತ್ತೂರು ನಗರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕೆಮ್ಮಿಂಜೆಯ ಕೂರ್ನಡ್ಕದ ಸಮೀಪ ಹಬೀಬ್ ಎಂಬವರು ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಚಲಾಯಿಸಿದ ಆರೋಪಿ. ಮಾರುತಿ ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ನಕಲಿ ಬಳಸಿ ಹಬೀಬ್ ಚಲಾಯಿಸುತ್ತಿದ್ದು, ರೌಂಡ್ಸ್‌ನಲ್ಲಿದ್ದ ಪೊಲೀಸರು ಕಾರನ್ನು ತಪಾಸಣೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

ಪರಿಶೀಲನೆಯ ಸಮಯದಲ್ಲಿ ಕಾರಿನ ನೋಂದಣಿ ಸಂಖ್ಯೆ, ಎಂಜಿನ್ ನಂಬರ್ ಮತ್ತು ಚೇಸೀಸ್ ನಂಬರ್‌ಗಳಲ್ಲಿ ‌ವ್ಯತ್ಯಾಸ‌ ಕಂಡುಬಂದಿದೆ. ಯಾವುದೋ ಮೋಸಗೊಳಿಸುವ ದುರುದ್ದೇಶದಿಂದ ನಕಲಿ ನಂಬರ್ ಪ್ಲೇಟ್ ಬಳಸಿ ಕಾರು ಚಲಾಯಿಸಲಾಗಿದೆ ಎಂಬುದಾಗಿ ಹಬೀಬ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.























































 
 

error: Content is protected !!
Scroll to Top