ಭೀಕರ ಕೃತ್ಯ ಎಸಗಿದ ಉಗ್ರನಿಗೆ ನೀಡಿದ ಶಿಕ್ಷೆ ಕಡಿಮೆಯಾಯಿತು ಎಂಬ ಅಭಿಪ್ರಾಯ
ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಅಪರಾಧಿ ಉಗ್ರ ಶಾರಿಖ್‌ಗೆ ವಿಧಿಸಲಾದ 10 ವರ್ಷ ಕಠಿಣ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಎನ್‌ಐಎ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. 10 ವರ್ಷ ಶಿಕ್ಷೆ ತುಂಬಾ ಕಡಿಮೆ ಆಯ್ತು ಎಂದು ಎನ್‌ಐಎ ನಿರ್ಧರಿಸಿದೆ. ಶಾರಿಕ್‌ಗೆ ಈಗ 27 ವರ್ಷ, ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಇನ್ನೂ 7 ವರ್ಷ ಮಾತ್ರ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
7 ವರ್ಷದಲ್ಲಿ ಆತನಿಗೆ 34 ವರ್ಷ ಆಗಲಿದೆ. ಮಧ್ಯಮ ವಯಸ್ಕನಾಗಿ ಹೊರಗೆ ಬಂದ್ರೆ ಮತ್ತೆ ಭಯೋತ್ಪಾದಕ ಕೃತ್ಯದಲ್ಲಿ ಆತ ಭಾಗಿ ಆಗುವ ಸಾಧ್ಯತೆ ಇದೆ. ಮನ ಪರಿವರ್ತನೆ ಸಾಧ್ಯತೆ ತೀರಾ ಕಡಿಮೆ ಎಂದು ಎನ್‌ಐಎ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕನಿಷ್ಠ 30 ವರ್ಷ ಜೈಲಿನಲ್ಲಿ ಆತನನ್ನು ಇರಿಸಲು ಎನ್‌ಐಎ ತೀರ್ಮಾನಿಸಿದೆ.
ಮಂಗಳೂರಿನ ಕದ್ರಿ ದೇಏವಸ್ಥಾನವನ್ನು ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರ ಶಾರಿಕ್‌ಗೆ ಕೊಟ್ಟ ಶೀಕ್ಷೆ ಕಡಿಮೆಯಾಗಿದೆ ಎಂಬ ಭಾವನೆ ಸಾರ್ವಜನಿಕ ವಲಯದಲ್ಲೂ ಇದೆ. ಇಷ್ಟು ಚಿಕ್ಕ ವಯಸ್ಸಿಗೆ ಕಠೋರ ಉಗ್ರನಾಗಿ ಬದಲಾಗಿರುವ ಒಅತಕಿ ಜೈಲಿನಿಂದ ಹೊರಗೆ ಬಂದ ಮೇಲೆ ಇನ್ನಷ್ಟು ಭೀಕ ಕೃಯ್ಯ ಎಸಗಲಿಕ್ಕಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹೀಗಾಗಿ ಆತನಿಗೆ ಕಾಯಂ ಆಗಿ ಜೈಲಿನಲ್ಲಿ ಇರುವ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಶಾರಿಕ್ ಸಾಗಿಸುತ್ತಿದ್ದ ಕುಕ್ಕರ್ ಬಾಂಬ್ ಆಟೋರಿಕ್ಷಾದಲ್ಲೇ ಸ್ಫೋಟಗೊಂಡ ಕಾರಣ ಮಂಗಳೂರಿನಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಒಂದು ವೇಳೆ ನೂರಾರು ಜನರು ಸೇರಿರುವ ದೇವಸ್ಥಾನವನ್ನು ಅವನು ತಲುಪಿದ್ದರೆ ಪರಿಸ್ಥಿತಿ ಬಹಳ ಘೋರವಾಗಿರುತ್ತಿತ್ತು. ಈ ಅಂಶವನ್ನು ನ್ಯಾಯಾಲಯ ತೀರ್ಪು ನೀಡುವಾಗ ಪರಿಗಣಿಸಬೇಕಿತ್ತು ಎಂದು ಹಲವರು ವಾದಿಸಿದ್ದಾರೆ. ಶಾರಿಕ್‌ಗೆ ನೀಡಿದ ಶಿಕ್ಷೆಯ ಹಿನ್ನೆಲೆಯಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯವೂ ಚರ್ಚೆಗೆ ಬಂದಿದೆ.
ಏ.27ರಂದು ಉಗ್ರ ಶಾರಿಖ್‌ಗೆ ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎನ್‌ಐಎ ಕೋರ್ಟ್ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ. ‘ಓರ್ವ ಮಗಳಿದ್ದಾಳೆ, ಮನೆಯಲ್ಲಿ ದುಡಿಯುವವನು ನಾನೊಬ್ಬನೇ, ಹೀಗಾಗಿ ಶಿಕ್ಷೆ ಕಡಿಮೆ ಮಾಡುವಂತೆ’ ಶಾರಿಕ್ ಮನವಿ ಮಾಡಿದ್ದಾನೆ. ಅಲ್ಲದೇ, ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡುವಂತೆಯೂ ಶಾರಿಕ್ ಮನವಿ ಮಾಡಿದ್ದಾನೆ.
2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿತ್ತು.
ಸ್ಫೋಟದಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಇಬ್ಬರೂ ಗಾಯಗೊಂಡಿದ್ದರು. ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಶಾರಿಕ್ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ಮತ್ತು ಮಾಡಿದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ.

























