ಸರ್ಕಾರಿ ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ನಾ ಪತ್ತೆ: ದೂರು ದಾಖಲು

ಬಂಟ್ವಾಳ: ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಚಿನ್ನಾಭರಣ, ನಗದು ಇದ್ದ ಪರ್ಸ್ ಕಳವಾದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಿಮಾರಿನ ಕಾಗೆಕಾನ ಬಲ್ಯ ‌ನಿವಾಸಿ ಕ್ರಿಸ್ತಿನಾ ವೇಗಸ್ ಅವರು ಪರ್ಸ್ ಕಳೆದುಕೊಂಡ ಮಹಿಳೆ.

ಪರ್ಸಿನಲ್ಲಿ ಐದೂವರೆ ಪವನಿನ ಕರಿಮಣಿ, ನಾಲ್ಕು ಗ್ರಾಂ ತೂಕದ ಚಿನ್ನದುಂಗುರ ಇದ್ದು, ಇದರ ಒಟ್ಟು ಮೌಲ್ಯ ಸುಮಾರು 6,24,000 ರೂ. ಎಂದು ತಿಳಿದು ಬಂದಿದೆ. ಇವರು ತಮ್ಮ ಪತಿಯ ಜೊತೆಗೆ ಕಾರ್ಯಕ್ರಮವೊಂದಕ್ಕೆ ಹೋಗಿ ಮರಳಿ ಬರುತ್ತಿದ್ದು, ಈ ಘಟನೆ ನಡೆದಿದೆ. ಅವರು ಬಿ.‌ಸಿ.ರೋಡ್‌ನಲ್ಲಿ ಬಸ್ಸು ಇಳಿದು ನೋಡಿದಾಗ ಪರ್ಸ್ ಕಳವಾಗಿರುವ ವಿಷಯ ಗಮನಕ್ಕೆ ಬಂದಿದೆ.























































 
 

ಪೊಲೀಸರಿಗೆ ನೀಡಿದ ದೂರಿನಲ್ಲಿ ಕ್ರಿಸ್ಟಿನಾ ಅವರು ಪರ್ಸ್ ಕಳವಾದ ಬಗ್ಗೆ ಸಂದೇಹ ವ್ಯಕ್ತಪಡಿಸಿರುವುದಾಗಿದೆ.

error: Content is protected !!
Scroll to Top