ಬಾಲ್ಯ ವಿವಾಹ ತಡೆದು, ಅಪ್ರಾಪ್ತೆಯನ್ನು ರಕ್ಷಿಸಿದ ಅಕ್ಕ ಪಡೆ

ಬೆಳಗಾವಿ: ನಗರದ ಮಂಟಮುರಿ ಕಾಲೊನಿಯಲ್ಲಿ ‌ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆದು, ಅಪ್ರಾಪ್ತ ಬಾಲಕಿಯನ್ನು ಅಕ್ಕ ಪಡೆ ರಕ್ಷಣೆ ಮಾಡಿದೆ.

ಅಕ್ಕ ಪಡೆ ಪಟ್ರೋಲಿಂಗ್ ನಡೆಯುತ್ತಿದ್ದ ವೇಳೆ ಇನ್ನೂ 18 ತುಂಬದ ‌ಯುವತಿಯ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಯುತ್ತಿರುವ ವಿಚಾರ ತಿಳಿದು ಬಂದಿದೆ. ಮಹಾರಾಷ್ಟ್ರದ ಪುಣೆಯ ಯುವಕನೊಬ್ಬನ ಜೊತೆಗೆ ಅಪ್ರಾಪ್ತೆಯ ಮದುವೆ ನಡೆಸಲು ಮನೆಯೊಂದರ ಮುಂದೆ ಮಂಟಪ ಹಾಕಲಾಗಿತ್ತು. ಅಕ್ಕ ಪಡೆಯ ಸಿಬ್ಬಂದಿ ಅನುಮಾನದಿಂದ ಅಲ್ಲಿ ಹೋಗಿ ವಿಚಾರಿಸಿದಾಗ ಅಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.

ವಧುವಿನ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಗೆ 17 ವರ್ಷ 4 ತಿಂಗಳು ಎಂದು ತಿಳಿದು ಬಂದಿದೆ. ತಕ್ಷಣವೇ ಈ ಬಾಲ್ಯ ವಿವಾಹದ ವಿಷಯವನ್ನು ಮಹಿಳಾ ಪೊಲೀಸ್ ಠಾಣೆಗೆ ಅಕ್ಕ ಪಡೆ ಮುಟ್ಟಿಸಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈ ಮದುವೆ ತಡೆದು, ಅಪ್ರಾಪ್ತೆಯನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ.























































 
 

ಈ ವಿವಾಹ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ಅಪ್ರಾಪ್ತೆಯ ತಂದೆಯ ಮೇಲೆ ಪ್ರಕರಣ ದಾಖಲಾಗಿದೆ.

error: Content is protected !!
Scroll to Top