ಶ್ವೇತ ಭವನದ ಭೋಜನ ಕೂಟದಲ್ಲಿ ಗುಂಡಿನ ದಾಳಿ : ಟ್ರಂಪ್‌ ದಂಪತಿಯ ರಕ್ಷಣೆ

ಮಾಧ್ಯಮದವರಿಗಾಗಿ ಆಯೋಜಿಸಿದ್ದ ಭೋಜನಕೂಟದಲ್ಲಿ ಕೇಳಿಸಿದ ಗುಂಡಿನ ಶಬ್ದ

ವಾಷಿಂಗ್ಟನ್ : ವಾಷಿಂಗ್ಟನ್‌ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತ ಭವನದ ವಾರ್ಷಿಕ ಭೋಜನಕೂಟದಲ್ಲಿ ಗಂಭೀರ ಸ್ವರೂಪದ ಭದ್ರತಾ ವೈಫಲ್ಯ ನಡೆದಿರುವುದು ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣಕ್ಕೂ ಮುನ್ನ ಗುಂಡಿನ ಶಬ್ದ ಕೇಳಿಬಂದು ಸಭಾಂಗಣದಲ್ಲಿ ಅವ್ಯವಸ್ಥೆ ಉಂಟಾಯಿತು. ನೂರಾರು ಪತ್ರಕರ್ತರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ರಾಜತಾಂತ್ರಿಕರಿಂದ ತುಂಬಿದ್ದ ಸಭಾಂಗಣದಲ್ಲಿ ಐದರಿಂದ ಎಂಟು ಬಾರಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ, ದಾರಿ ಬಿಡಿ, ಕೆಳಗೆ ಬಾಗಿ ಎಂದು ಕೂಗುತ್ತಾ ಅಧ್ಯಕ್ಷ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ದರು. ಆ ಸಮಯದಲ್ಲಿ ಸಭಾಂಗಣದಲ್ಲಿದ್ದ ನೂರಾರು ಅತಿಥಿಗಳು ಪ್ರಾಣಭೀತಿಯಿಂದ ಟೇಬಲ್‌ಗಳ ಕೆಳಗೆ ಅಡಗಿ ಕುಳಿತರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಅಧ್ಯಕ್ಷರು ಮತ್ತು ಅವರ ಸಂಪುಟದ ಸದಸ್ಯರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.























































 
 

ಈ ಘಟನೆ ಜುಲೈ 13, 2024ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಟ್ರಂಪ್ ಮೇಲಿನ ಹತ್ಯೆ ಯತ್ನದ ನೆನಪುಗಳನ್ನು ಮರುಕಳಿಸಿತು. ಅಂದು ಕಿವಿಗೆ ಗುಂಡು ತಗುಲಿ ಕೂದಲೆಳೆಯ ಅಂತರದಲ್ಲಿ ಟ್ರಂಪ್ ಪಾರಾಗಿದ್ದರು. ಇಂದು ಮತ್ತೆ ಅಂತಹದ್ದೇ ಶೂಟೌಟ್ ವರದಿಗಾರರ ಭೋಜನಕೂಟದಲ್ಲಿ ನಡೆದಿದ್ದು, ಅಮೆರಿಕದ ಅತ್ಯುನ್ನತ ನಾಯಕರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಒಬ್ಬ ಬಂದೂಕುಧಾರಿ ಇರುವಿಕೆಯನ್ನು ಪೊಲೀಸರು ದೃಢಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ವಾಷಿಂಗ್ಟನ್‌ನಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ.

ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯ ಮೇಲೆ ಪದೇ ಪದೇ ನಡೆಯುತ್ತಿರುವ ಇಂತಹ ದಾಳಿಯ ಯತ್ನಗಳು ಅಮೆರಿಕದ ಆಂತರಿಕ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಈ ಘಟನೆಯು ಅಮೆರಿಕದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

error: Content is protected !!
Scroll to Top