ಪುತ್ತೂರು: ಬಾಲಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಚ ಘಟನೆ ಗಡಿಯಾರ ಎಂಬಲ್ಲಿ ನಡೆದಿದೆ.
ಮೃತನನ್ನು ನೇರಳಕಟ್ಟೆ ಕೊಡಾಜೆಯ ಶಹೀರ್(15) ಎಂದು ಗುರುತಿಸಲಾಗಿದೆ.
ನೇರಳಕಟ್ಟೆಯ ಗಣೇಶ್ ನಗರದ ಫ್ಲಾಟ್ ಒಂದರಲ್ಲಿ ಬಾಲಕ ಹೆತ್ತವರ ಜೊತೆಗೆ ವಾಸವಾಗಿದ್ದು, ಶಾಲೆಗೆ ರಜೆಯಾದ ಕಾರಣ ಗಡಿಯಾರದಲ್ಲಿರುವ ತನ್ನ ಅಜ್ಜನ ಮನೆಗೆ ತೆರಳಿದ್ದ. ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.

























