ಸುಳ್ಯ: ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಶ್ರೀ ಶಾರದಾ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 7 ಮಂದಿ ಡಿಸ್ಟಿಂಕ್ಷನ್, 25 ಮಂದಿ ಪ್ರಥಮ ದರ್ಜೆ, 5 ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗುತ್ತಿಗಾರು ಕಮಿಲದ ಕೆ. ಬಾಲಕೃಷ್ಣ ಪೂಜಾರಿ ಮತ್ತು ಲಲಿತಾ ದಂಪತಿಯ ಪುತ್ರಿ ತನುಶ್ರೀ-589 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ದುಗಲಡ್ಕದ ಸುರೇಶ್ ಐ. ಮತ್ತು ಜಯಶೀಲ ಬಿ. ವಿ. ದಂಪತಿಯ ಪುತ್ರಿ ಸಮೀಕ್ಷಾ ಡಿ. ಎಸ್. -582 ಅಂಕಗಳಿಸಿ ದ್ವಿತೀಯ ಸ್ಥಾನ, ಅಜ್ಜಾವರದ ಗುಲುಂಬು ಮನೆಯ ಜಿ. ಶಾಫಿ ಅಜ್ಜಾವರ ಮತ್ತು ರಮ್ಲ ದಂಪತಿಯ ಪುತ್ರಿ ಫಾತಿಮತ್ ಶಫಾನ-557 ಮತ್ತು ಐವರ್ನಾಡಿನ ಗುಡ್ಡಪ್ಪ ಗೌಡ ಮತ್ತು ರತ್ನಕುಮಾರಿ ದಂಪತಿಯ ಪುತ್ರಿ ಸಮೃದ್ಧಿ ಸಿ.-557 ಅಂಕಗಳಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ. ಸೋಮವಾರಪೇಟೆಯ ಹೊರೂರಿನ ರವೀಂದ್ರ ಕೆ. ಯು. ಮತ್ತು ಜಯಶ್ರೀ ಕೆ. ಆರ್. ದಂಪತಿಯ ಪುತ್ರಿ ಸಾನ್ವಿ ಕೆ. ಆರ್.-539, ಪೈಚಾರ್ನ ಲತೀಫ್ ಬಿ. ಮತ್ತು ಜುಲೈಕಾ ದಂಪತಿಯ ಪುತ್ರಿ ಶಝಮರಿಯಂ -537,ಕೋಲ್ಟಾರ್ ನ ರಮೇಶ್ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ದೀಕ್ಷಿತಾ ಕೆ. ಆರ್. -532 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

























