ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಮೂರ್ತಿಯನ್ನು ಭಗ್ನಗೊಳಿಸಿದ ಯುವಕ

ಬೆಳ್ತಂಗಡಿ: ಬೆಳ್ತಂಗ ತಾಲೂಕಿನ ಪ್ರಸಿದ್ಧ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ಎಸಗಿ ದೈವದ ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಅಜೇಯ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ತಡರಾತ್ರಿ ಸುಬ್ರಹ್ಮಣ್ಯ ಭಟ್‌ ಎಂಬವರ ಮನೆಗೆ ಥಾರ್‌ ಕಾರಿನಲ್ಲಿ ಬಂದ ಅಜೇಯ್‌ ಎನನ್‌ ಬಚಾವು ಮಲ್ಪಿ ಎಂದು ತುಳುವಿನಲ್ಲಿ ನೂಗಾಡಿದ್ದಾನೆ. ಮನೆಯವರು ಅವನನ್ನು ಗದರಿಸಿ ಕಳುಹಿಸಿದ್ದು, ಬಳಿಕ ದೇಗುಲದ ಕೆರೆಗೆ ಹಾರಿದ ಅಜೇಯ್, ದೇವಸ್ಥಾನದ ಹೆಂಚುಗಳನ್ನು ತೆಗೆದು ಒಳ ನುಗ್ಗಿದ್ದಾನೆ. ದೇಗುಲದ ಒಳಗಿದ್ದ ಪೂಜಾ ಪರಿಕರಗಳು ಹಾಗೂ ದೈವದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ದೇವರ ಮೂರ್ತಿಯನ್ನು ಭಗ್ನಗೊಳಿಸಿ ಘಂಟಾಮಣಿಯನ್ನು ಎಸೆದು ವಿಕೃತಿ ಮೆರೆದಿದ್ದಾನೆ.

ಅಜೇಯ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈ ಕೃತ್ಯದ ಹಿಂದೆ ಮಾನಸಿಕ ಅಸ್ವಸ್ಥತೆಯ ಶಂಕೆ ವ್ಯಕ್ತವಾಗಿದೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಪೊಲೀಸರು ಅವನನ್ನು ಎಚ್ಚರಿಕೆ ಕೊಟ್ಟ ಬಿಟ್ಟು ಕಳುಹಿಸಿದ್ದಾರೆ.























































 
 
error: Content is protected !!
Scroll to Top