ಬೋಳಾರ ಬೇಸಿಗೆ ಶಿಬಿರದಲ್ಲಿ ಮಹಾಭಾರತ ರಸಪ್ರಶ್ನೆ

ಮಂಗಳೂರು: ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ, ಮಂಗಳೂರು ಮತ್ತು ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ರಿ. ಆಶ್ರಯದಲ್ಲಿ ದೇವಳದ ಪಠಾರದಲ್ಲಿ ಜರಗುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಮಹಾಭಾರತ ವಿಷಯಧಾರಿತ ಲಿಖಿತ ರಸಪ್ರಶ್ನೆ ನಡೆಸಲಾಯಿತು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ ಈ ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ನಡೆಸಿಕೊಟ್ಟರು.























































ಟ್ರಸ್ಟ್ ಸದಸ್ಯ ಶ್ರೀಧರ ಎಸ್. ಪಿ. ಕೃಷ್ಣಾಪುರ, ಶಿಬಿರದ ಸಂಯೋಜಕ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಸದಸ್ಯರು, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಶ್ರೀ ಸುಭಾಶ್ಚಂದ್ರ ಕಾಂಚನ್,
ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

 
 

5ರಿಂದ 10ನೇ ತರಗತಿ ವರೆಗಿನ 23 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಹಿರಿಯ ಮತ್ತು ಕಿರಿಯ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

error: Content is protected !!
Scroll to Top