ತಾಯಿಗೆ ಬೈಕ್‌ನಿಂದ ಗುದ್ದಿದ ಪಾಪಿ ಮಗ: ದೂರು ದಾಖಲು

ಕಡಬ: ಮಗನೇ ತಾಯಿಗೆ ಬೈಕ್ ಢಿಕ್ಕಿ ಹೊಡೆಸಿ ಗಾಯಗೊಳಿಸಿದ್ದು, ಆರೋಪಿ ಮಗ ದಯಾನಂದನ ‌ವಿರುದ್ಧ ಕಡಬ ‌ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಾಳು ಮಹಿಳೆಯನ್ನು ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿ ಪುಷ್ಪಾವತಿ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಪುಷ್ಪಾವತಿ ಅವರ ಪುತ್ರಿ ಬಂಟ್ವಾಳದ ಇರ್ವತ್ತೂರು ನಿವಾಸಿ ಚೇತನಾ ಬಿ. ಅವರು ಪೊಲೀಸರಿಗೆ ದೂರು ನೀಡಿರುವುದಾಗಿದೆ.























































 
 

ದೂರಿನಲ್ಲಿ ಎ. 4 ರಂದು ದಯಾನಂದ್ ಅವರು ತಮ್ಮ ತಾಯಿ ಪುಷ್ಪಾವತಿ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜ್ಜಿ ಮನೆಗೆ ಹೋಗುವುದಾಗಿ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ತಾಯಿಯನ್ನು ಬೈಕ್‌ನಿಂದ ಕೆಳಕ್ಕೆ ಇಳಿಸಿ ಕೊಂಚ ದೂರ ನಡೆದುಕೊಂಡು ಹೋಗುವಂತೆ ತಿಳಿಸಿದ್ದು, ನಡೆದುಕೊಂಡು ಹೋಗುತ್ತಿದ್ದ ತಾಯಿಯ ಮೇಲೆ ಅವರು ಬೈಕ್ ಹತ್ತಿಸಿದ್ದಾರೆ. ಇದರಿಂದ ತಾಯಿಯ ಎದೆ, ತಲೆಯ ಭಾಗಕ್ಕೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top