ವಿಜಯಪುರ: ರಿಯಲ್ ಎಸ್ಟೇಟ್ ಉದ್ಯಮಿ, ಗ್ರಾ. ಪಂ. ಮಾಜಿ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತನನ್ನು ಗೊಡಂದಡ್ಡಿ ನಿವಾಸಿ ರಾಜು ಬಾಪು ಖರೆ ಎಂದು ಗುರುತಿಸಲಾಗಿದೆ.
ರಾಜು ಅವರು ಹೋಗುತ್ತಿದ್ದ ಜೀಪಿಗೆ ಟಿಪ್ಪರ್ ಗುದ್ದಿಸಿ, ಬಳಿಕ ಬೇಕಾಬಿಟ್ಟಿ ಗುಂಡು ಹಾರಿಸಿದ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ಥಾರ್ ಜೀಪ್‌ನ ಡೋರ್ ಓಪನ್ ಆಗದೇ ಇದ್ದ ಸಮಯದಲ್ಲಿ ಅದರ ಮೇಲೆ ಕಲ್ಲನ್ನೂ ಎತ್ತಿ ಹಾಕಿ ಮತ್ತಷ್ಟು ಕ್ರೌರ್ಯ ಮೆರೆದಿದ್ದಾರೆ.
ಈ ಕೊಲೆಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























