ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 250 ಮಂದಿ ನಾಪತ್ತೆ

ರೊಹಿಂಗ್ಯಾ ನಿರಾಶ್ರಿತರನ್ನು ಮಲೇಷ್ಯಾಕ್ಕೆ ಸಾಗಿಸುತ್ತಿದ್ದ ದೋಣಿ ಮುಳುಗಡೆ

ಢಾಕ್ಕಾ: ಅಂಡಮಾನ್ ಸಮುದ್ರದಲ್ಲಿ ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದ ಪರಿಣಾಮ ಸುಮಾರು 250 ರೋಹಿಂಗ್ಯಾ ನಿರಾಶ್ರಿತರು ಹಾಗೂ ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ ಜಿಲ್ಲೆಯ ಟೆಕ್ನಾಫ್‌ನಿಂದ ಈ ದೋಣಿ ಮಲೇಷ್ಯಾಕ್ಕೆ ತೆರಳುತ್ತಿತ್ತು. ದೋಣಿಯಲ್ಲಿ ರೊಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ಪ್ರಜೆಗಳಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚು ಜನರು ತುಂಬಿ ಓವರ್‌ಲೋಡ್‌ ಅಗಿದ್ದ ದೋಣಿ ದೋಣಿ ಭಾರಿ ಬಿರುಗಾಳಿ ಹಾಗೂ ಅಲೆಗಳ ಹೊಡೆತದಿಂದ ನಡುಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಅದರಲ್ಲಿದ್ದ 250ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಹಾಗೂ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿದೆ. ದೋಣಿ ಮಗುಚಿದ ನಿಖರ ದಿನ ಇನ್ನೂ ಸ್ಪಷ್ಟವಾಗಿಲ್ಲ.























































 
 

ಏ.9ರಂದು ಬಾಂಗ್ಲಾದೇಶ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ತೇಲುತ್ತಿದ್ದ ಒಂಭತ್ತು ಮಂದಿಯನ್ನು ರಕ್ಷಿಸಿದೆ. ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾರೆ. ಡ್ರಮ್‌ಗಳು ದಿಮ್ಮಿಗಳನ್ನು ಹಿಡಿದು ತೇಲುತ್ತಿದ್ದವರನ್ನು ಗುರುತಿಸಿ ರಕ್ಷಿಸಲಾಗಿದೆ ಎಂದು ಕೋಸ್ಟ್‌ಗಾರ್ಡ್‌ ವಕ್ತಾರ ಲೆಫ್ಟಿನೆಂಟ್ ಕಮಾಂಡರ್ ಶಬ್ಬೀರ್ ಆಲಮ್ ಸುಜನ್ ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟವರಲ್ಲಿ ಆರು ಮಂದಿಯನ್ನು ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬದುಕುಳಿದವರಲ್ಲಿ ಒಬ್ಬರಾದ ರಫೀಕುಲ್ ಇಸ್ಲಾಂ, ಮಲೇಷ್ಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಕಳ್ಳಸಾಗಣೆದಾರರು ತಮ್ಮನ್ನು ದೋಣಿಗೆ ಕರೆದೊಯ್ದರು ಎಂದು ಹೇಳಿದ್ದಾರೆ. ಟ್ರಾಲರ್‌(ಮೀನುಗಾರಿಕಾ ದೋಣಿ)ನೊಳಗಿನ ಜನದಟ್ಟಣೆಯಿಂದ 25ರಿಂದ 30 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ದೋಣಿಯಿಂದ ಚೆಲ್ಲಿದ ಇಂಧನದಿಂದ ನನಗೆ ಸುಟ್ಟ ಗಾಯಗಳಾಗಿವೆ. ದೋಣಿ ಮುಳುಗಿದ ನಂತರ ಸುಮಾರು 36 ಗಂಟೆಗಳ ಕಾಲ ಸಮುದ್ರದಲ್ಲಿ ತೇಲುತ್ತಾ ಬದುಕುಳಿದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

error: Content is protected !!
Scroll to Top