ಕರಾವಳಿಯಲ್ಲಿ ಉಷ್ಣ ಮಾರುತ ಬೀಸುವ ಎಚ್ಚರಿಕೆ

ಎರಡು ದಿನ ಉಷ್ಣಾಂಶ ಗರಿಷ್ಠ ಮಟ್ಟಕ್ಕೇರುವ ಸಾಧ್ಯತೆ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಇಂದಿನಿಂದ ಎರಡು ದಿನ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಏ.10 ರಿಂದ 12ರವರೆಗೆ ಉಷ್ಣ ಮಾರುತ ಬೀಸುವ ಸಾಧ್ಯತೆಯಿದ್ದು, ಅಧಿಕ ಉಷ್ಣಾಂಶ ದಾಖಲಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ದವಾಗಿದ್ದು ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದಲ್ಲದೆ ಅಧಿಕ ಗಾಳಿ ಒತ್ತಡದಿಂದಾಗಿ ಕಾರವಾರ ಸೇರಿದಂತೆ ಕರಾವಳಿ ಮೀನುಗಾರರು ಮೀನುಗಾರಿಕೆ ಬಂದ್ ಮಾಡಿದ್ದಾರೆ. ಆಳ ಸಮುದ್ರಕ್ಕೆ ತೆರಳುವ ಪರ್ಶಿಯನ್ ಬೋಟುಗಳು ಬಂದರಿನಲ್ಲಿ ಲಂಗುರು ಹಾಕಿವೆ.























































 
 
error: Content is protected !!
Scroll to Top