ವಿದ್ಯುತ್‌ ಸ್ಥಾವರಗಳ ಸುತ್ತ ಮಾನವ ಸರಪಳಿ : ಅಮೆರಿಕ ಬೆದರಿಕೆಗೆ ಇರಾನ್‌ ಪ್ರತಿತಂತ್ರ

ಮಂಗಳವಾರ ರಾತ್ರಿಯೊಳಗೆ ಇರಾನನ್ನು ಸರ್ವನಾಶ ಮಾಡುವುದಾಗಿ ಎಚ್ಚರಿಸಿರುವ ಟ್ರಂಪ್‌

ಟೆಹ್ರಾನ್‌: ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು ಸರ್ವನಾಶ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ ಬೆ3ನ್ನಲ್ಲೇ ಇರಾನ್‌ ತನ್ನ ರಕ್ಷಣೆಗೆ ತಂತ್ರ ಹೆಣೆದಿದೆ. ಟ್ರಂಪ್‌ ನೋಡೊದ ಗಡುವು ಸಮೀಪಿಸುತ್ತಿದ್ದಂತೆ ಇರಾನ್‌ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಕರೆ ಕೊಟ್ಟಿದೆ.

ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಮಂಗಳವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪ್ರಮುಖ ಇಂಧನ ಮೂಲಸೌಕರ್ಯಗಳು ಹಾಗೂ ವಿದ್ಯುತ್‌ ಸ್ಥಾವರಗಳ ಬಳಿ ಒಟ್ಟುಗೂಡುವಂತೆ ಇರಾನ್‌ನ ಯುವ & ಕ್ರೀಡಾ ಸಚಿವಾಲಯ ಹೇಳಿದೆ.























































 
 

ಯುವಜನರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹಲವು ವಿಶ್ವವಿದ್ಯಾಲಯದ ಯುವಜನರು, ಯುವ ಕಲಾವಿದರು ಹಾಗೂ ಯುವ ಸಂಘಟನೆಗಳು ದೇಶದ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚಿಸುವಂತೆ ಪ್ರಸ್ತಾಪಿಸಿದ್ದಾರೆ. ʻಉಜ್ವಲ ಭವಿಷ್ಯಕ್ಕಾಗಿ ಇರಾನ್‌ ಯುವಕರ ಮಾನವ ಸರಪಳಿʼ ಘೋಷವಾಕ್ಯದಡಿ ಅಭಿಯಾನ ಆರಂಭಿಸಲಾಗುತ್ತದೆ. ದೇಶದ ಏಕತೆ ಮತ್ತು ದೃಢನಿಶ್ಚಯ ಪ್ರತಿಬಿಂಬಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ದೇಶಾದ್ಯಂತ ಯುವಜನರ ಭಾಗವಹಿಸುವಿಕೆಯೊಂದಿಗೆ ವಿದ್ಯುತ್‌ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚನೆಯಾಗಲಿದೆ. ಇದು ಮೂಲಸೌಕರ್ಯವನ್ನು ರಕ್ಷಿಸುವ ಮತ್ತು ಇರಾನ್‌ ಉಜ್ವಲ ಭವಿಷ್ಯಕ್ಕಾಗಿ ಯುವಕರ ಬದ್ಧತೆಯನ್ನು ಸೂಚಿಸುವ ಸಂಕೇತವಾಗಲಿದೆ ಎಂದು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಉಪಮುಖ್ಯಸ್ಥ ಅಲಿರೆಜಾ ರಹೀಮಿ ಹೇಳಿದ್ದಾರೆ.

ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಮತ್ತು ಹಾರ್ಮುಜ್ ಜಲಸಂಧಿಯನ್ನ ಮತ್ತೆ ತೆರೆಯಲು ವಿಫಲವಾದರೆ ಇರಾನಿನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಡೊನಾಲ್ಡ್‌ ಟ್ರಂಪ್ ಎಚ್ಚರಿಸಿದ್ದರು. ಅಮೆರಿಕ ಒಂದೇ ರಾತ್ರಿಯಲ್ಲಿ ಇಡೀ ಇರಾನ್ ದೇಶವನ್ನು ನಾಶಪಡಿಸಬಹುದು. ಅದು ಮಂಗಳವಾರ ರಾತ್ರಿ ಆಗಿರಬಹುದು ಎಂದು ವಾರ್ನಿಂಗ್‌ ಕೊಟ್ಟಿದ್ದರು.

error: Content is protected !!
Scroll to Top