ಮಕ್ಕಳಿಗೆ ಪ್ರಕೃತಿ ಒಡಲಿನ ಅಗಾಧತೆಯನ್ನು ತಿಳಿಸುವ ಅರ್ಥಪೂರ್ಣ ಶಿಬಿರ
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ತಿಂಗಳಾಡಿ ಎಂಬಲ್ಲಿ ನಡೆಯುವ ರಾಜ್ಯಮಟ್ಟದ ‘ಸುಬ್ಬಜ್ಜನ ಮನೆಯಲ್ಲಿ ವಸತಿಯುತ ಬೇಸಿಗೆ ಶಿಬಿರ’ವನ್ನು ಈ ಬಾರಿ ಏಪ್ರಿಲ್ 16ರಿಂದ 19ರವರೆಗೆ ನಡೆಸಲಾಗುತ್ತಿದೆ. ಕಾಡಿನ ರಹಸ್ಯ ತಿಳಿಯುವುದು, ಟ್ರೆಷರ್ ಹಂಟ್, ವರ್ಲಿ ಆರ್ಟ್, ನೀರಾಟ, ಗೋವು ಮೇವು, ಗೋ ಪೂಜೆ, ನಿತ್ಯ ಪೂಜೆ, ರಾಮಾಯಣ ದೃಶ್ಯ ಕಾವ್ಯ, ಭಗವದ್ ಗೀತೆ ಜೊತೆಗೆ ಜೀವನ ಕೌಶಲಗಳನ್ನು ತಿಳಿಸುವ ಹತ್ತು ಹಲವು ಕುತೂಹಲಕಾರಿ ಮನರಂಜನಾ ಆಟಗಳನ್ನು ಜೋಡಿಸಿಕೊಳ್ಳಲಾಗಿದೆ. ಆಕಾಶ ವೀಕ್ಷಣೆ-ನಿದ್ರೆ, ರಂಗೋಲಿ, ಸೌದೆ ಒಲೆ ಅಡಿಗೆ ಕಲಿಕೆ, ಗೆರಟೆ ಚಿತ್ರ, ವ್ಯವಹಾರದ ಪಾಠದ ಜೊತೆ ಮಕ್ಕಳ ನಿತ್ಯ ಕರ್ಮಗಳ ಅಭ್ಯಾಸವು ಸಾಧ್ಯವಾಗುತ್ತಿದೆ.
ಇದರ ಸಂಪೂರ್ಣ ನಿರ್ವಹಣೆಯ ರಾಮಕೃಷ್ಣ ಮಠದ ಭಕ್ತ ಹಾಗೂ ಮನಃಶಾಸ್ತ್ರಜ್ಞರಾದ ಲಕ್ಷ್ಯ ಸಂಸ್ಥೆಯ ಸಂಸ್ಥಾಪಕ ಶ್ರೀದುರ್ಗಾ ಪರಮೇಶ್ವರ ಭಟ್ ವಹಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಜೊತೆಗಿನ ಸಂಪರ್ಕ ಶಾಲಾ ಮಕ್ಕಳಿಗೆ ಕಡಿತವಾಗುತ್ತಿರುವುದರಿಂದ ಸುಬ್ಬಜ್ಜನ ಮನೆ ಶಿಬಿರವು ಮಕ್ಕಳಿಗೆ ಪ್ರಕೃತಿ ಒಡಲಿನ ಅವಶ್ಯಕತೆಯನ್ನು ಹಾಗೂ ಅಗಾಧತೆಯನ್ನು ತಿಳಿಸುತ್ತದೆ. ಮೊದಲು ನೋಂದಾಯಿಸಿಕೊಳ್ಳುವ ಆಸಕ್ತ 30 ಮಕ್ಕಳಿಗೆ ಅವಕಾಶವನ್ನು ನೀಡಲಾಗುತ್ತಿದೆ. ದೂರವಾಣಿ ಸಂಖ್ಯೆ 9740645095 / 9663826972 ಕರೆ ಮಾಡುವುದರ ಮೂಲಕ ಸಂಪರ್ಕಿಸಬಹುದು.
























