ಪೆಟ್ರೋಕೆಮಿಕಲ್ ಉತ್ಪನ್ನಗಳ ಕಸ್ಟಮ್ಸ್ ಸುಂಕ ಶೂನ್ಯಕ್ಕಿಳಿಸಿದ ಸರ್ಕಾರ

ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧ, ಆಟೋಮೊಬೈಲ್ ಕ್ಷೇತ್ರಗಳಿಗೆ ಅನುಕೂಲ

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ಪೂರೈಕೆ ವ್ಯತ್ಯಯ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಆಯ್ದ 40 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಶೂನ್ಯ ಸುಂಕವನ್ನು ವಿಧಿಸಿದೆ. ಈ ವಿನಾಯಿತಿ ಏಪ್ರಿಲ್‌ 2ರಿಂದ ಜೂನ್‌ 30ರವರೆಗೆ ಜಾರಿಯಲ್ಲಿರುತ್ತದೆ.

ಮೆಥನಾಲ್, ಟೊಲ್ಯೂನ್, ಸ್ಟೈರೀನ್, ವಿನೈಲ್ ಕ್ಲೋರೈಡ್ ಮೊನೊಮರ್, ಅಸಿಟಿಕ್ ಆಸಿಡ್, ಪಿವಿಸಿ ಮತ್ತು ಪಾಲಿಥಿಲಿನ್‌ನಂತಹ ಪಾಲಿಮರ್‌ಗಳು ಈ ಪಟ್ಟಿಯಲ್ಲಿವೆ. ಅಮೋನಿಯಂ ನೈಟ್ರೇಟ್ ಮೇಲಿನ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಸಹ ಶೂನ್ಯಕ್ಕೆ ಇಳಿಸಲಾಗಿದೆ.























































 
 

ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧ ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕಾ ವಲಯಗಳಿಗೆ ಕಚ್ಚಾವಸ್ತುಗಳ ವೆಚ್ಚ ಕಡಿಮೆಯಾಗಲಿದೆ. ಕಚ್ಚಾವಸ್ತುಗಳ ಬೆಲೆ ಇಳಿಕೆಯಾದಾಗ ಅಂತಿಮ ಉತ್ಪನ್ನಗಳ ಬೆಲೆಯೂ ತಗ್ಗಲಿದ್ದು ಗ್ರಾಹಕರಿಗೆ ಪರೋಕ್ಷವಾಗಿ ಸಹಕಾರಿಯಾಗಲಿದೆ. ಸುಂಕ ಕಡಿತ ಮಾಡುವುದರಿಂದ ನಮ್ಮ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗಲಿದೆ.

error: Content is protected !!
Scroll to Top