ಏ.1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ

ಟೋಲ್ ದರ ಶೇ 4ರಿಂದ 5ರಷ್ಟು ಏರಿಕೆ

ಬೆಂಗಳೂರು : ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಶುಲ್ಕವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ. ಇದರಿಂದಾಗಿ ಕರ್ನಾಟಕದ ಪ್ರಮುಖ 9 ಹೆದ್ದಾರಿಗಳಲ್ಲಿ ಕಾರು, ಬಸ್ ಮತ್ತು ಲಾರಿಗಳ ಟೋಲ್ ದರದಲ್ಲಿ ಶೇ 4ರಿಂದ 5ರಷ್ಟು ಏರಿಕೆಯಾಗಲಿದೆ.

ರಾಜ್ಯದ ಆರ್ಥಿಕ ಜೀವನಾಡಿಗಳಂತಿರುವ ಬೆಂಗಳೂರು-ಮಂಗಳೂರು, ಮಂಗಳೂರು-ಉಡುಪಿ-ಕುಂದಾಪುರ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಬೆಂಗಳೂರು-ತುಮಕೂರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಹಾಸನ ಸೇರಿದಂತೆ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ದರ ಅನ್ವಯವಾಗಲಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವರ್ಗದ ವಾಹನಗಳಿಗೆ ಈ ಹೊರೆ ತಟ್ಟಲಿದೆ. ವಾರ್ಷಿಕ ಪಾಸ್ ದರವೂ ಸಹ ಏರಿಕೆಯಾಗಲಿದ್ದು, 3,000 ರೂ. 3,075 ರೂ.ಗೆ ಏರಲಿದೆ.























































 
 

ಬೆಂಗಳೂರು – ತುಮಕೂರು-ಹಾವೇರಿ-ಬೆಳಗಾವಿ-ಮುಂಬೈ, ಬೆಂಗಳೂರು – ಮೈಸೂರು ಎಕ್ಸ್​​ಪ್ರೆಸ್ ವೇ, ಬೆಂಗಳೂರು – ಹೈದರಾಬಾದ್, ಬೆಂಗಳೂರು- ಹಾಸನ- ಮಂಗಳೂರು, ಬೆಂಗಳೂರು-ಹೊಸಕೋಟೆ-ಕೋಲಾರ, ಮಂಗಳೂರು-ಉಡುಪಿ-ಕುಂದಾಪುರ, ವಿಜಯಪುರ-ಹೊಸಪೇಟೆ-ಚಿತ್ರದುರ್ಗ, ಹಿರಿಯೂರು-ಬಳ್ಳಾರಿ-ಜೇವರ್ಗಿ, ಮೈಸೂರು- ಗುಂಡ್ಲಪೇಟೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಹೆಚ್ಚಳವಾಗಲಿದೆ.

ಪ್ರತಿ ವರ್ಷ ನಿರ್ವಹಣೆಯ ಹೆಸರಿನಲ್ಲಿ ಶೇ 5ರಷ್ಟು ಟೋಲ್ ದರ ಏರಿಕೆ ಮಾಡುತ್ತಿರುವುದಕ್ಕೆ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ಸಂಬಳ ವರ್ಷಕ್ಕೆ ಶೇ.1 ಅಥವಾ 2ರಷ್ಟು ಮಾತ್ರ ಏರಿಕೆಯಾಗುತ್ತದೆ, ಆದರೆ ಟೋಲ್ ದರ ಮಾತ್ರ ಶೇ.5ರಷ್ಟು ಹೆಚ್ಚಾಗುತ್ತಿದೆ ಇದು ಎಷ್ಟು ಸರಿ ಎಂದು ವಾಹನ ಮಾಲೀಕರು ಪ್ರಶ್ನಿಸುತ್ತಿದ್ದಾರೆ.

error: Content is protected !!
Scroll to Top