ನವದೆಹಲಿ: ಭಾರತದಲ್ಲಿ ಎಲ್ಪಿಜಿ ಮತ್ತು ಇಂಧನಕ್ಕೆ ಕೊರತೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಕಾರಣಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಕಂಡಿದ್ದರೂ, ಭಾರತ ಮಾತ್ರ ಸರಬರಾಜು ಮತ್ತು ಬೆಲೆಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲಾ ಕಾರಣಗಳಿಂದ ಜನರು ಪ್ರಧಾನಿ ಮೋದಿ ಸರ್ಕಾರವನ್ನು ನಂಬಬೇಕು ಎಂದವರು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಚಿಲ್ಲರೆ ಬೆಲೆಗಳು ಏರುತ್ತಿರುವಾಗ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗದ ಏಕೈಕ ದೇಶ ಭಾರತವಾಗಿದೆ. ಪ್ರಧಾನಿಯವರು ಯಾವುದೇ ಲಾಕ್ಡೌನ್ ಇರುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ದೇಶದಲ್ಲಿ ಎಂದಿನಂತೆ ವ್ಯವಹಾರವನ್ನು ನಿರ್ವಹಿಸುವಾಗ ನಾವು ನಿರಂತರ ಅನಿಲ ಪೂರೈಕೆಯನ್ನು ಖಚಿತಪಡಿಸುತ್ತಿದ್ದೇವೆ ಎಂದು ಶಾ ಭರವಸೆ ನೀಡಿದ್ದಾರೆ.

























