ಹಾಡುಹಗಲೇ ಮಹಿಳೆಯ ಮಾಂಗಲ್ಯ ಸರಕ್ಕೆ ಕನ್ನ ಹಾಕಿದ ಖದೀಮರು

ಬೆಂಗಳೂರು: ನೆಲಮಂಗಲ ಸಮೀಪದ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿಯಲ್ಲಿ ಹಾಡುಹಗಲೇ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ನಡೆದಿದೆ.

ಬೇಕರಿಯ ‌ಸಮೀಪ ನಿಂತಿದ್ದ ಮಹಿಳೆಯೊಬ್ಬರ ತಾಳಿ ಸರವನ್ನು ಖದೀಮರು ದೋಚಿದ್ದಾರೆೆ‌. ಬೇಕರಿಯಲ್ಲಿ ಜ್ಯೂಸ್ ಕುಡಿಯುವಂತೆ ನಟನೆ ಮಾಡಿ ಕಳ್ಳರು ಅವರ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.

ಸರ ಎಳೆದ ರಭಸಕ್ಕೆ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ಸರ 55 ಗ್ರಾಂ ತೂಕವಿತ್ತು ಎಂದು ತಿಳಿದು ಬಂದಿದೆ‌. ಸಿಸಿಟಿವಿಯಲ್ಲಿಯೂ ‌ಸರಗಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಕುದೂರು ಪೊಲೀಸರು ಬಲೆ ಬೀಸಿದ್ದಾರೆ.























































 
 

error: Content is protected !!
Scroll to Top