ಹರ್ಮುಜ್ ಜಲಸಂಧಿ ಮಿತ್ರ ರಾಷ್ಟ್ರಗಳಿಗೆ ಮುಕ್ತ: ನಿಲುವು ಸ್ಪಷ್ಟಪಡಿಸಿದ ಇರಾನ್

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಸದ್ಯಕ್ಕೆ ಮುಗಿಯದ ಇಕ್ಕಟ್ಟು ಎಂಬಂತಾಗಿದೆ. ಇರಾನ್ ದೇಶವು ಹರ್ಮುಜ್ ಜಲಸಂಧಿಗೆ ‌ಸಂಬಂಧಿಸಿದ ಹಾಗೆ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದೆ.

ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯಾ ಗುಟೆರಸ್ ಅವರ ಜೊತೆಗೆ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತುಕತೆ ನಡೆಸಿದ್ದು, ದೇಶದ ಭದ್ರತೆಯ ಹಿನ್ನೆಲೆಯಲ್ಲಿ ಮಿತ್ರರಿಗೆ ಜಲಸಂಧಿ ತೆರೆಯುವ ಮತ್ತು ಶತ್ರುಗಳಿಗೆ ಜಲಸಂಧಿ ಮುಚ್ಚುವ ಸಂಪೂರ್ಣ ಹಕ್ಕು ಇರಾನಿಗೆ ಇದೆ ಎಂದು ಹೇಳಿದ್ದಾರೆ.

ಅಮೆರಿಕಾ ಮತ್ತು ಇಸ್ರೇಲಿನ ಆಕ್ರಮಣಕಾರಿ ಧೋರಣೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಅಶಾಂತಿ ನಿರ್ಮಾಣವಾಗಿದೆ. ಅಲ್ಲಿನ ನಾಗರಿಕರನ್ನು ಅಮೆರಿಕಾ ಸೇನೆ ಮಾನವ ಗುರಾಣಿಗಳು ಎಂಬಂತೆ ಬಳಸಿಕೊಳ್ಳುತ್ತಿವೆ ಎಂದು ಅರಘ್ಚಿ ದೂರಿದ್ದಾರೆ.























































 
 

ಹೋಟೆಲ್ ಬುಕಿಂಗ್ ರಸೀದಿಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅರಘ್ಚಿ, ಇರಾನ್ ತನ್ನ ಮಿಲಿಟರಿ ನೆಲೆಗಳ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಅಮೆರಿಕದ ಅಧಿಕಾರಿಗಳು ಭಯಗೊಂಡು ತಮ್ಮನೆಲೆಗಳಿಂದ ಓಡಿ ಹೋಗಿ ಹೋಟೆಲ್‌ಗಳಲ್ಲಿ ಅವಿತು ಕುಳಿತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳ ಹೋಟೆಲ್‌ಗಳು ಅಮೆರಿಕದ ಅಧಿಕಾರಿಗಳಿಗೆ ಆಶ್ರಯ ನೀಡಬಾರದು, ಇದು ಸ್ಥಳೀಯ ನಾಗರಿಕರ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

error: Content is protected !!
Scroll to Top