ತೊಕ್ಕೊಟ್ಟು ಫ್ಲೈ ಓವರ್ನಲ್ಲಿ ನಸುಕಿನ ಹೊತ್ತು ಬರ್ಬರ ಕೊಲೆ
ಮಂಗಳೂರು: ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ನೆತ್ತರು ಹರಿದಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಫೈಓವರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ (40) ಕೊಲೆಯಾದ ರೌಡಶೀಟರ್. ಆತನ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ಯಾವುದೇ ಪ್ರಕರಣಗಳು ಇರಲಿಲ್ಲ ಎಂದು ತಿಳಿದುಬಂದಿದೆ. 2022ರಲ್ಲಿ ಆತನನ್ನು ಕೊಲೆ ಮಾಡುವ ಯತ್ನ ಉಚ್ಚಿಲದ ಬಳಿ ನಡೆದಿತ್ತು. ಈ ಸಂಬಂಧ ನೌಫಾಲ್ ಮತ್ತು ತಂಡದವರನ್ನು ಪೊಲೀಸರು ಬಂಧಿಸಿದ್ದರು.
ಇಂದು ಬೆಳ್ಳಂಬೆಳ್ಳಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆರೋಪಿಗಳು ಕಾರಿನಲ್ಲಿ ಬಂದು ಹಿಬ್ಬಂದಿಯಿಂದ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ರೌಡಿಶೀಟರ್ ರಸ್ತೆಗೆ ಬಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಪರಾರಿಯಾಗಿದ್ದಾರೆ. ಆತನಿಗಾಗಿ ಹಂತಕರು ಫ್ಲೈಓವರ್ ಮೇಲೆಯೇ ಕಾದು ಕುಳಿತಿದ್ದರು ಎನ್ನಲಾಗಿದೆ.
ಆರೀಫ್ ಮೀನಿನ ವ್ಯಾಪಾರ ನಡೆಸುತ್ತಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು 3.30ರ ವೇಳೆಗೆ ಬುಲೆಟ್ ಬೈಕ್ನಲ್ಲಿ ಮಂಗಳೂರಿನ ಕಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಓವರ್ಬ್ರಿಡ್ಜ್ ಮೇಲ್ಸೇತುವೆಯಲ್ಲಿ ದುಷ್ಕರ್ಮಿಗಳ ತಂಡವು ಅವರ ಮೇಲೆ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅವರನ್ನು ಸ್ಥಳದಲ್ಲೇ ಹತ್ಯೆ ಮಾಡಿ ಪರಾರಿಯಾಗಿದೆ.

























