ನಾಳೆಯಿಂದ ಶುರುವಾಗಲಿದೆ ಐಪಿಎಲ್‌ ಹಬ್ಬ : 2 ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ

ಮಾ.28ರಂದು ಆರ್‌ಸಿಬಿ-ಸನ್‌ರೈಸರ್ಸ್‌ ಹೈದರಾಬಾದ್ ಮಧ್ಯೆ ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ

ಬೆಂಗಳೂರು : ಶನಿವಾರದಿಂದ ಸುಮಾರು ಎರಡು ತಿಂಗಳು ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಪಂದ್ಯಗಳ ಹಬ್ಬ. ಈ ವರ್ಷದ ಐಪಿಎಲ್ ಪಂದ್ಯಗಳು ಮಾರ್ಚ್ 28ರಿಂದ ಪ್ರಾರಂಭವಾಗಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗುತ್ತವೆ.

19ನೇ ಆವೃತ್ತಿಯ ಐಪಿಎಲ್​ನ ವೇಳಾಪಟ್ಟಿಯನ್ನು ಬಿಸಿಸಿಐ ಎರಡು ಹಂತದಲ್ಲಿ ಪ್ರಕಟಿಸಿದೆ. ಐಪಿಎಲ್ ಪಂದ್ಯಗಳು ನಡೆಯುವ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ಕಾರಣ ಬಿಸಿಸಿಐ, ಐಪಿಎಲ್ ವೇಳಾಪಟ್ಟಿಯನ್ನು ಎರಡು ಭಾಗಗಳಲ್ಲಿ ಪ್ರಕಟಿಸಿತ್ತು. ಮೊದಲು ಮಾರ್ಚ್ 28ರಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ 20 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಘೋಷಿಸಿತ್ತು. ಏಪ್ರಿಲ್ 13ರಿಂದ ಮೇ 24ರವರೆಗೆ ನಡೆಯಲಿರುವ ಉಳಿದ 50 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ.























































 
 

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಜಾಗತಿಕ ಉದ್ವಗ್ನತೆ, ಬಾರತದಲ್ಲಿ ಎಲ್‌ಪಿಜಿ ಕೊರತೆಯಿಂದ ಉಂಟಾದ ಕೋಲಾಹಲ ಐಪಿಎಲ್‌ ಪಂದ್ಯಗಳ ಮೇಲೆ ಪ್ರಭಾವ ಬೀರುವ ಆತಂಕ ಇತ್ತು. ಆದರೆ ಎಲ್ಲ ಪಂದ್ಯಗಳು ಸುಸೂತ್ರವಾಗಿ ನಡೆಯಲಿವೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.

ಪಂದ್ಯಗಳು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಖನೌ, ಜೈಪುರ, ಧರ್ಮಶಾಲಾ, ರಾಯ್‌ಪುರ ಮತ್ತು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಈ ಆವೃತ್ತಿಯಲ್ಲಿ ಒಟ್ಟು 12 ಡಬಲ್ ಹೆಡರ್‌ ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಡಬಲ್ ಹೆಡರ್ ಪಂದ್ಯ ಮಧ್ಯಾಹ್ನ 3.30ಕ್ಕೆ, ಎರಡನೇ ಪಂದ್ಯ ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ. ಎಂದಿನಂತೆ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ದಿನಾಂಕಗಳನ್ನು ಲೀಗ್ ಹಂತದ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು.

ಐಪಿಎಲ್ 2026 ರ ಸಂಪೂರ್ಣ ವೇಳಾಪಟ್ಟಿ

  1. ಮಾರ್ಚ್ 28 (ಶನಿವಾರ): ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7.30)
  2. ಮಾರ್ಚ್ 29 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7.30)
  3. ಮಾರ್ಚ್ 30 (ಸೋಮವಾರ): ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ – ಗುವಾಹಟಿ (ಸಂಜೆ 7.30)
  4. ಮಾರ್ಚ್ 31 (ಮಂಗಳವಾರ): ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7.30)
  5. ಏಪ್ರಿಲ್ 1 (ಬುಧವಾರ): ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7.30)
  6. ಏಪ್ರಿಲ್ 2 (ಗುರುವಾರ): ಸನ್‌ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7.30)
  7. ಏಪ್ರಿಲ್ 3 (ಶುಕ್ರವಾರ): ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7.30)
  8. ಏಪ್ರಿಲ್ 4 (ಶನಿವಾರ): ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಮಧ್ಯಾಹ್ನ 3.30)
  9. ಏಪ್ರಿಲ್ 4 (ಶನಿವಾರ): ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7.30)
  10. ಏಪ್ರಿಲ್ 5 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಮಧ್ಯಾಹ್ನ 3.30)
  11. ಏಪ್ರಿಲ್ 5 (ಭಾನುವಾರ): ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7.30)
  12. ಏಪ್ರಿಲ್ 6 (ಸೋಮವಾರ): ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7.30)
  13. ಏಪ್ರಿಲ್ 7 (ಮಂಗಳವಾರ): ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ – ಗುವಾಹಟಿ (ಸಂಜೆ 7.30)
  14. ಏಪ್ರಿಲ್ 8 (ಬುಧವಾರ): ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಡೆಲ್ಲಿ (ಸಂಜೆ 7.30)
  15. ಏಪ್ರಿಲ್ 9 (ಗುರುವಾರ): ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7.30)
  16. ಏಪ್ರಿಲ್ 10 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ – ಗುವಾಹಟಿ (ಸಂಜೆ 7.30)
  17. ಏಪ್ರಿಲ್ 11 (ಶನಿವಾರ): ಸನ್‌ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಮಧ್ಯಾಹ್ನ 3.30)
  18. ಏಪ್ರಿಲ್ 11 (ಶನಿವಾರ): ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7.30)
  19. ಏಪ್ರಿಲ್ 12 (ಭಾನುವಾರ): ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಮಧ್ಯಾಹ್ನ 3.30)
  20. ಏಪ್ರಿಲ್ 12 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7.30)
  21. ಏಪ್ರಿಲ್ 13 (ಸೋಮವಾರ): ರಾಜಸ್ಥಾನ ರಾಯಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7.30)
  22. ಏಪ್ರಿಲ್ 14 (ಮಂಗಳವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7.30)
  23. ಏಪ್ರಿಲ್ 15 (ಬುಧವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7.30)
  24. ಏಪ್ರಿಲ್ 16 (ಗುರುವಾರ): ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7.30)
  25. ಏಪ್ರಿಲ್ 17 (ಶುಕ್ರವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7.30)
  26. ಏಪ್ರಿಲ್ 18 (ಶನಿವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಮಧ್ಯಾಹ್ನ 3:30)
  27. ಏಪ್ರಿಲ್ 18 (ಶನಿವಾರ): ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7.30)
  28. ಏಪ್ರಿಲ್ 19 (ಭಾನುವಾರ): ರಾಜಸ್ಥಾನ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಮಧ್ಯಾಹ್ನ 3.30)
  29. ಏಪ್ರಿಲ್ 19 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7.30)
  30. ಏಪ್ರಿಲ್ 20 (ಸೋಮವಾರ): ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7.30)
  31. ಏಪ್ರಿಲ್ 21 (ಮಂಗಳವಾರ): ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7.30)
  32. ಏಪ್ರಿಲ್ 22 (ಬುಧವಾರ): ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7.30)
  33. ಏಪ್ರಿಲ್ 23 (ಗುರುವಾರ): ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
  34. ಏಪ್ರಿಲ್ 24 (ಶುಕ್ರವಾರ): ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
  35. ಏಪ್ರಿಲ್ 25 (ಶನಿವಾರ): ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಡೆಲ್ಲಿ (ಮಧ್ಯಾಹ್ನ 3:30)
  36. ಏಪ್ರಿಲ್ 25 (ಶನಿವಾರ): ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
  37. ಏಪ್ರಿಲ್ 26 (ಭಾನುವಾರ): ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಮಧ್ಯಾಹ್ನ 3:30)
  38. ಏಪ್ರಿಲ್ 26 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)
  39. ಏಪ್ರಿಲ್ 27 (ಸೋಮವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
  40. ಏಪ್ರಿಲ್ 28 (ಮಂಗಳವಾರ): ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7:30)
  41. ಏಪ್ರಿಲ್ 29 (ಬುಧವಾರ): ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
  42. ಏಪ್ರಿಲ್ 30 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
  43. ಮೇ 01 (ಶುಕ್ರವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
  44. ಮೇ 02 (ಶನಿವಾರ): ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
  45. ಮೇ 03 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಮಧ್ಯಾಹ್ನ 3:30)
  46. ​​ಮೇ 03 (ಭಾನುವಾರ): ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
  47. ಮೇ 04 (ಸೋಮವಾರ): ಲಕ್ನೋ ಸೂಪರ್‌ಜೈಂಟ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
  48. ಮೇ 05 (ಮಂಗಳವಾರ): ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
  49. ಮೇ 06 (ಬುಧವಾರ): ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
  50. ಮೇ 07 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)
  51. ಮೇ 08 (ಶುಕ್ರವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
  52. ಮೇ 09 (ಶನಿವಾರ): ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
  53. ಮೇ 10 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಮಧ್ಯಾಹ್ನ 3:30)
  54. ಮೇ 10 (ಭಾನುವಾರ): ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)
  55. ಮೇ 11 (ಸೋಮವಾರ): ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಸಂಜೆ 7:30)
  56. ಮೇ 12 (ಮಂಗಳವಾರ): ಸನ್‌ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
  57. ಮೇ 13 (ಬುಧವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)
  58. ಮೇ 14 (ಗುರುವಾರ): ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಸಂಜೆ 7:30)
  59. ಮೇ 15 (ಶುಕ್ರವಾರ): ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)
  60. ಮೇ 16 (ಶನಿವಾರ): ಗುಜರಾತ್ ಟೈಟಾನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
  61. ಮೇ 17 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಮಧ್ಯಾಹ್ನ 3:30)
  62. ಮೇ 17 (ಭಾನುವಾರ): ರಾಜಸ್ಥಾನ ರಾಯಲ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
  63. ಮೇ 18 (ಸೋಮವಾರ): ಸನ್‌ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
  64. ಮೇ 19 (ಮಂಗಳವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
  65. ಮೇ 20 (ಬುಧವಾರ): ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
  66. ಮೇ 21 (ಗುರುವಾರ): ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
  67. ಮೇ 22 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
  68. ಮೇ 23 (ಶನಿವಾರ): ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)
  69. ಮೇ 24 (ಭಾನುವಾರ): ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಮಧ್ಯಾಹ್ನ 3:30)
  70. ಮೇ 24 (ಭಾನುವಾರ): ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
error: Content is protected !!
Scroll to Top