ಉಗ್ರರ ಜೊತೆ ನಂಟು: ಬಳ್ಳಾರಿಯ ಅಬ್ದುಲ್ ಸಲಾಮ್‌ನನ್ನು ಬಂಧಿಸಿದ ವಿಜಯವಾಡ ಪೊಲೀಸರು

ಬಳ್ಳಾರಿ: ಆನ್‌ಲೈನಿನಲ್ಲಿ ‌ಮೂಲಭೂತವಾದದ ಬಗ್ಗೆ ಪ್ರಚಾರ, ಉಗ್ರರ ಜೊತೆ ನಂಟು ಹೊಂದಿರುವ ಆರೋಪದಲ್ಲಿ ದೇಶದಲ್ಲಿ 12 ಯುವಕರನ್ನು ಬಂಧಿಸಲಾಗಿದ್ದು, ಇದರಲ್ಲಿ ಓರ್ವ ಬಂಧಿತ ಬಳ್ಳಾರಿಯವ ಎಂದು ತಿಳಿದು ಬಂದಿದೆ.

ಶಂಕಿತನನ್ನು ಬಳ್ಳಾರಿಯ ಅಬ್ದುಲ್ ಸಲಾಮ್ (36) ಎಂದು ಗುರುತಿಸಲಾಗಿದೆ.

ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಜಯವಾಡ ಪೊಲೀಸರು ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.























































 
 

ನಿಷೇಧಿತ ಉಗ್ರ ಸಂಘಟನೆಗಳ ಜೊತೆ ನಂಟು, ಉಗ್ರವಾದದ ಬಗ್ಗೆ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಆರೋಪಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿಯ ಅಬ್ದುಲ್ಲಾನ ಬಗೆಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕೌಲ್ ‌ಬಜಾರ್ ಪೊಲೀಸರ ನೆರವಿನೊಂದಿಗೆ ಆತನನ್ನು ಪಂಚನಾಮೆ ‌ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಆತನನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ಯಲಾಗಿದೆ.

ವಿಜಯವಾಡದ ವಿಂಚ್‌ಪೇಟ್ ನಲ್ಲಿ ಪ್ರಮುಖ ಅರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಬಂಧಿಸಿದ್ದರು. ಪ್ರಮುಖ ಅರೋಪಿ ನೀಡಿದ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ದೇಶಾದ್ಯಂತ 12 ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top