ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್

ಬೆಂಗಳೂರು: ವಿದ್ರಾರ್ಥಿನಿಯೊಬ್ಬಳಿಗೆ ಪ್ರೊಫೆಸರ್ ಒಬ್ಬ ತರಗತಿ ನಡೆಯುತ್ತಿರುವಾಗಲೇ ಲವ್ ಪ್ರೊಪೋಸ್ ಮಾಡಿದ್ದು, ಇದು ವಿವಾದ ಸೃಷ್ಟಿ ಮಾಡಿದೆ.

ಪ್ರತಿಷ್ಟಿತ ಮೆಡಿಕಲ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಪ್ರೊ. ಅಬ್ದುಲ್ಲಾ ಎಂಬಾತ ಚಾಕೊಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆಯನ್ನು ತರಗತಿಯಲ್ಲೇ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಆಕ್ರೋಶದಿಂದ ಆತನನ್ನು ಪ್ರಶ್ನೆ ಮಾಡಿದ್ದಾಳೆ.

ಘಟನೆಯಿಂದ ವಿವಾದ ಉಂಟಾಗಿತ್ತು, ಬೇರೆ ವಿದ್ಯಾರ್ಥಿಗಳು ಸಹ ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆತನನ್ನು ಹಿಂಬಾಲಿಸಿ ಕ್ಯಾಂಪಸ್ ನಲ್ಲೇ ಹೊಡೆದಿರುವ ಘಟನೆ ಸಹ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದ ಹಾಗೆ ಪ್ರೊಫೆಸರ್ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ.























































 
 

ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!
Scroll to Top